ಸಾಂಬಾ: ಮುಂಬರುವ ಅಮರನಾಥ ಯಾತ್ರೆಗೆ ಅಡ್ಡಿಪಡಿಸಲು ಸಂಚು ರೂಪಿಸುತ್ತಿದ್ದ ಪಾಕಿಸ್ತಾನ ಮೂಲದ ಭಯೋತ್ಪಾದಕರ ಕುಕೃತ್ಯವನ್ನು ಗಡಿ ಭದ್ರತಾ ಪಡೆ ವಿಫಲಗೊಳಿಸಿದೆ. ಜಮ್ಮು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಅಂತರಾಷ್ಟ್ರೀಯ ಗಡಿ ಉದ್ದಕ್ಕೂ ಗಡಿಯಾಚೆಗಿನ ಸುರಂಗವನ್ನು ಗಡಿಭದ್ರತಾ ಪಡೆಯ ಸಿಬ್ಬಂದಿ ಪತ್ತೆಹಚ್ಚಿದ್ದಾರೆ. ಸುರಂಗ-ರಚನೆ ವಿರುದ್ಧದ ಕಾರ್ಯಾಚರಣೆಯ ಸಂದರ್ಭದಲ್ಲಿ ಬಿ.ಎಸ್.ಎಫ್ ಪಡೆಗಳು ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ 265-ಅಡಿ ಉದ್ದದ ಆಮ್ಲಜನಕದ ಪೈಪ್‌ಗಳನ್ನು ಅಗೆದು ಪತ್ತೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಂತರ ಜಮ್ಮು ಪ್ರದೇಶದಲ್ಲಿ ತೀವ್ರ ಎಚ್ಚರಿಕೆ ಘೋಷಣೆ ಮಾಡಲಾಗಿದೆ. ಕಾರ್ಯಾಚರಣೆಯಲ್ಲಿ ಮೇ. 5 ರ ಸಂಜೆ 5.30ಕ್ಕೆ ಯಶಸ್ಸು ಕಂಡಿದ್ದಾರೆ. ಸುರಂಗವನ್ನು ಪತ್ತೆಹಚ್ಚಿದಾಗ ಅದರ ಪಕ್ಕದಲ್ಲಿ ಹಸಿರು ಮರಳಿನ ಚೀಲಗಳಿದ್ದವು. ಇದು 150 ಮೀಟರ್ ಉದ್ದವಿತ್ತು. ಒಳಗಿನಿಂದ ಬೇಲಿಯವರೆಗೆ 100 ಮೀಟರ್ ಅಳತೆ ಮತ್ತು ಅಲ್ಲಿಂದ 50 ಮೀಟರ್ ಅರಣ್ಯ ಪ್ರದೇಶದಲ್ಲಿ ತೆರೆಕಂಡಿದ್ದವು. ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ ಪವಿತ್ರ ಗುಹೆ ದೇಗುಲಕ್ಕೆ ಮುಂಬರುವ ಅಮರನಾಥ ಯಾತ್ರೆಯನ್ನು ಅಡ್ಡಿಪಡಿಸಲು ಭಯೋತ್ಪಾದಕರು ನಡೆಸಿದ್ದ ಸಂಚನ್ನು ವಿಫಲಗೊಳಿಸಲಾಗಿದೆ ಎಂದು ಜಮ್ಮು ಫ್ರಾಂಟಿಯರ್‌ನ ಬಿಎಸ್‌ಎಫ್‌ನ ಇನ್ಸ್‌ಪೆಕ್ಟರ್ ಜನರಲ್ ಡಿ. ಕೆ. ಬೂರಾ ತಿಳಿಸಿದ್ದಾರೆ.
ಅಮರನಾಥ ಯಾತ್ರೆಗೆ ಅಡ್ಡಿಪಡಿಸಲು ಯೋಜಿಸಿದ್ದ ಉಗ್ರರ ಯೋಜನೆ ವಿಫಲ : ಬಿಎಸ್‌ಎಫ್
























