ಕುಕ್ಕುಂದೂರು ನಾಗಸ್ಥಾನಕ್ಕೆ ಧಾರವಾಡ ಎಸ್‌ಪಿ ಕೃಷ್ಣಕಾಂತ್ ಭೇಟಿ

ಕಾರ್ಕಳ : ಕುಕ್ಕುಂದೂರು ಗ್ರಾಮದ ಪರಪು ಶ್ರೀ ನಾಗಸ್ಥಾನಕ್ಕೆ ಮೇ. 6ರಂದು ಧಾರವಾಡ ಎಸ್‌ಪಿ, ಐಪಿಎಸ್‌ ಅಧಿಕಾರಿ ಪಿ. ಕೃಷ್ಣಕಾಂತ್‌ ಅವರು ಭೇಟಿ ನೀಡಿ, ಪಂಚಮಿ ಸೇವೆ ನೆರವೇರಿಸಿದರು. ಈ ಸಂದರ್ಭ ನಾಗಸ್ಥಾನ ಸೇವಾ ಸಮಿತಿ ಮುಖ್ಯಸ್ಥ ರಾಜೇಶ್‌ ರಾವ್‌, ನಾಗಸ್ಥಾನ ಸಮಿತಿ ಅಧ್ಯಕ್ಷ ಶಿವರಾಂ ರಾವ್‌ ಉಪಸ್ಥಿತರಿದ್ದರು.
2019ರಲ್ಲಿ ಕಾರ್ಕಳ ಉಪವಿಭಾಗದ ಎಎಸ್‌ಪಿಯಾಗಿ ಒಂದು ವರ್ಷ ಕಾಲ ಕರ್ತವ್ಯ ನಿರ್ವಹಿಸಿದ್ದರು. ಅತ್ಯಂತ ದಕ್ಷತೆ, ಪ್ರಾಮಾಣಿಕತೆ, ಭ್ರಷ್ಟಚಾರಹಿತವಾಗಿ ಕಾರ್ಯನಿರ್ವಹಿಸುವ ಮೂಲಕ ಕೃಷ್ಣಕಾಂತ್‌ ಅವರು ಜನಮೆಚ್ವುಗೆಗೆ ಪಾತ್ರರಾಗಿದ್ದರು. ಇಂದಿಗೂ ಕಾರ್ಕಳ ಕೃಷ್ಣಕಾಂತ್‌ ಅವರ ಸೇವೆಯನ್ನು ಸ್ಮರಿಸುತ್ತಿದೆ.

















































error: Content is protected !!
Scroll to Top