ಕಾರ್ಕಳ : ಬಾಡಿಗೆ ತಮಗೆ ಕೊಡದೇ ಬೇರೆಯವರಿಗೆ ನೀಡಿರುವುದಕ್ಕೆ ಮೂವರು ರಿಕ್ಷಾ ಚಾಲಕರು ವ್ಯಕ್ತಿಯೋರ್ವರ ಮೇಲೆ ಹಲ್ಲೆಗೈದ ಘಟನೆ ಘಟನೆ ಎ. 29ರಂದು ಪ್ರೈಮ್ ಮಾಲ್ ಬಳಿ ನಡೆದಿದೆ. ಜೋಡುರಸ್ತೆಯ ಬಟ್ಟೆ ಅಂಗಡಿಯಲ್ಲಿ ಕೆಲಸಮಾಡಿಕೊಂಡಿದ್ದ, ಯೋಗೀಶ್ (47) ತಮ್ಮ ಬೈಕ್‌ನಲ್ಲಿ ಪ್ರೈಮ್ ಮಾಲ್ ಕಡೆಗೆ ಹೋಗುತ್ತಿದ್ದಾಗ ರಿಕ್ಷಾ ಚಾಲಕರಾದ ಪದ್ಮನಾಭ ಶೆಟ್ಟಿಗಾರ್, ಮನೋಜ್ ಮತ್ತು ಫಾಸ್ಕಲ್ ಅವಾಚ್ಯ ಶಬ್ಧಗಳಿಂದ ನಿಂದಿಸಿರುತ್ತಾರೆ. ವಾಪಸ್ ಯೋಗೀಶ್ ಬರುತ್ತಿರುವ ಸಂದರ್ಭ ಹಲ್ಲೆಗೈದು, ಜೀವ ಬೆದರಿಕೆಯೊಡ್ಡಿರುತ್ತಾರೆ. ಪರಿಣಾಮ ಯೋಗೀಶ್ ಅವರ ಗಾಯವಾಗಿದೆ. ಗಾಯಾಳು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Recent Comments
ಕಗ್ಗದ ಸಂದೇಶ
on