Saturday, May 21, 2022
spot_img
Homeಸುದ್ದಿನಗರ ಸಂಪರ್ಕ ರಸ್ತೆ ದ್ವಿಪಥವಾಗಿ ಪರಿವರ್ತನೆ - ಸುನೀಲ್‌ ಕುಮಾರ್‌

ನಗರ ಸಂಪರ್ಕ ರಸ್ತೆ ದ್ವಿಪಥವಾಗಿ ಪರಿವರ್ತನೆ – ಸುನೀಲ್‌ ಕುಮಾರ್‌

ಕಾರ್ಕಳ : ಕುಂಟಲ್ಪಾಡಿ ತಾವರೆಕಟ್ಟೆ ವೃತ್ತ ಬಳಿ ದ್ವಿಪಥ ರಸ್ತೆ ಹಾಗೂ ಕಾಂಕ್ರೀಟ್‌ ಚರಂಡಿ ನಿರ್ಮಾಣಕ್ಕೆ ಎ. 30ರಂದು ಸಚಿವ ವಿ. ಸುನಿಲ್‌ ಕುಮಾರ್‌ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಾರ್ಕಳ ನಗರ ಪ್ರವೇಶಿಸುವ ಎಲ್ಲ ರಸ್ತೆಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ದ್ವಿಪಥ ರಸ್ತೆಗಳನ್ನಾಗಿ ಪರಿವರ್ತನೆ ಮಾಡಲಾಗುವುದು. ಈ ಭಾಗದ ಜನರ ಬೇಡಿಕೆಯಂತೆ ಕುಂಟಲ್ಪಾಡಿಯಲ್ಲಿ ಸಾರ್ವಜನಿಕ ಹಿಂದೂ ರುದ್ರಭೂಮಿಗೆ 10 ಲಕ್ಷ ರೂ. ಅನುದಾನ, ರಿಕ್ಷಾ ತಂಗುದಾಣಕ್ಕೆ 3.5 ಲಕ್ಷ ರೂ, ರಸ್ತೆ ಅಭಿವೃದ್ಧಿಗೆ 75 ಲಕ್ಷ ರೂ. ಬಿಡುಗಡೆಗೊಳಿಸಲಾಗಿದೆ ಎಂದರು.
ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ್‌ ಕುಮಾರ್‌, ಪುರಸಭಾ ಅಧ್ಯಕ್ಷೆ ಸುಮಾ ಕೇಶವ್‌ ,ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ಸದಸ್ಯೆ ಮೀನಾಕ್ಷಿ ಗಂಗಾಧರ, ಮಹಾವೀರ ಹೆಗ್ಡೆ, ಪ್ರಕಾಶ್ ರಾವ್‌, ರವೀಂದ್ರ ಮೊಯ್ಲಿ, ನಿರಂಜನ್‌ ಜೈನ್‌, ನಾರಾಯಣ ಪ್ರಭು, ಶಂಕರ ಶೆಟ್ಟಿ, ಗೋವಿಂದ ರಾವ್‌, ಸ್ಥಾಯಿ ಸಮಿತಿ ಅಧ್ಯಕ್ಷ ಯೋಗೀಶ್‌ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

ಪುರಸಭೆ ವಾರ್ಡ್‌ ನಂ. 13ರಲ್ಲಿರುವ ಕುಡಿಯುವ ನೀರಿನ ಬಾವಿಕಟ್ಟೆಯನ್ನು (8 ಲಕ್ಷ ರೂ.) ಲೋಕಾರ್ಪಣೆಗೊಳಿಸಲಾಯಿತು. ಈ ವೇಳೆ ಪುರಸಭಾ ಸದಸ್ಯ ಪ್ರದೀಪ್‌ ರಾಣೆ, ಅಧಿಕಾರಿ ವರ್ಗ, ಸ್ಥಳೀಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!