ಜಾನ್‌ ಸ್ಪೋರ್ಟ್ಸ್‌ ಅಕಾಡೆಮಿ ವತಿಯಿಂದ ಬೇಸಿಗೆ ಈಜು ಶಿಬಿರ

ಕಾರ್ಕಳ :‌ ನಗರದ ಕರಿಯಕಲ್ಲು ಪರಿಸರದಲ್ಲಿರುವ ಜಾನ್ ಸ್ಪೋರ್ಟ್ಸ್‌ ಅಕಾಡೆಮಿ ವತಿಯಿಂದ ಎ. 1ರಿಂದ ಈಜು ಶಿಬಿರ ಪ್ರಾರಂಭಗೊಳ್ಳಲಿದೆ. ಬೆಳಗ್ಗೆ 8.30 – 9.30, 9.30 – 10.30, 10.30 – 11.30. ಸಂಜೆ 6 – 7, 7 – 8, 8 – 9 ಈಜು ತರಬೇತಿ ನಡೆಯಲಿದೆ.

ಆಹಾರ ಸಹಿತ ಒಂದು ದಿನದ ಪ್ಯಾಕೇಜ್‌ ಇಂತಿವೆ.
ಮಧ್ಯವಯಸ್ಕರಿಗೆ 700 ರೂ., 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ 600 ರೂ. ನೋಂದಣಿ ಶುಲ್ಕವಾಗಿದ್ದು ಈ ಪ್ಯಾಕೇಜ್‌ನಲ್ಲಿ ವಾಟರ್‌ ಪಾರ್ಕ್‌, ಸ್ವಿಮ್ಮಿಂಗ್‌ ಪೂಲ್‌, ಬ್ಯಾಡ್ಮಿಂಟನ್‌ ಆಡಲು ಅವಕಾಶವಿದೆ. (ಬ್ಯಾಡ್ಮಿಂಟನ್‌ ರಾಕೆಟ್‌ ಆಟಗಾರರೇ ತರುವಂತದ್ದು) ಆಹಾರ ಪ್ಯಾಕೇಜ್‌ಗಳು ಮೊದಲೇ ನೋಂದಣಿ ಮಾಡಿದವರಿಗೆ ಮಾತ್ರ ಲಭ್ಯವಿರಲಿದೆ.

ಅರ್ಧ ದಿನ (ನೋಂದಣಿ ಮಾಡಿ 4 ಗಂಟೆಗಳ ಕಾಲ) ಮಧ್ಯ ವಯಸ್ಕರಿಗೆ 300 ರೂ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ 250 ರೂ. ನೋಂದಣಿ ಶುಲ್ಕವಾಗಿದ್ದು, ಬ್ಯಾಡ್ಮಿಂಟನ್‌ ಮತ್ತು ಆಹಾರ ಪ್ಯಾಕೇಜ್‌ ಇರುವುದಿಲ್ಲ.

ಕೇವಲ ಸ್ವಿಮ್ಮಿಂಗ್‌ ಪೂಲ್‌ ನೋಂದಣಿ ಶುಲ್ಕ 90 ನಿಮಿಷಗಳಿಗೆ ಮಧ್ಯವಯಸ್ಕರಿಗೆ ರೂ. 60, 12 ವರ್ಷದ ಕೆಳಗಿನ ಮಕ್ಕಳಿಗೆ ರೂ. 60
ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಲಭ್ಯವಿರುತ್ತದೆ. ಈಜು ಪಟುಗಳಿಗೆ ನೈಲಾನ್‌ ಬಟ್ಟೆ ಧರಿಸುವುದು ಖಡ್ಡಾಯವಾಗಿರುತ್ತದೆ. ನೈಲಾನ್‌ ಬಟ್ಟೆಗಳು ಬಾಡಿಗೆಗೆ ಕೂಡಾ ಲಭ್ಯವಿರುತ್ತದೆ. ಬ್ಯಾಡ್ಮಿಂಟನ್‌ ಪ್ರಿಯರಿಗಾಗಿ 6 ಅಂತರಾಷ್ಟ್ರೀಯ ಮಟ್ಟದ ಒಳಾಂಗಣ ಕ್ರೀಡಾಂಗಣವಿದ್ದು 75 ನಿಮಿಷಗಳಿಗೆ ನೋಂದಣಿ ಶುಲ್ಕ ಮಧ್ಯ ವಯಸ್ಕರಿಗೆ ರೂ. 100, ದ್ವಿತೀಯ ಪಿಯುಸಿವರೆಗಿನ ಮಕ್ಕಳಿಗೆ 50 ರೂ. ಆಗಿರುತ್ತದೆ. ಆಟದ ಸಲಕರಣೆಗಳನ್ನು ಅಭ್ಯರ್ಥಿಗಳೆ ತರುವಂತದ್ದು, ಸ್ಟೇಡಿಯಂ ಬೆಳಗ್ಗೆ 6.30ರಿಂದ ರಾತ್ರಿ 10 ಗಂಟೆಯವರೆಗೆ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ : 7022545813, 9845015793 ಸಂಪರ್ಕಿಸಬಹುದಾಗಿದೆ.

















































































error: Content is protected !!
Scroll to Top