ಎ. 2ರಿಂದ 8 : ನೆಲ್ಲಿಕಾರು ಬಸದಿ ಮಹಾರಥಯಾತ್ರಾ ಮಹೋತ್ಸವ

ಕಾರ್ಕಳ : ಅತಿಶಯ ಶ್ರೀ ಕ್ಷೇತ್ರ ನೆಲ್ಲಿಕಾರು ಬಸದಿ ಭಗವಾನ್‌ ಅನಂತಸ್ವಾಮಿ ಮತ್ತು ಬ್ರಹ್ಮಯಕ್ಷ ದೇವರ ಮಹಾರಥಯಾತ್ರಾ ಮಹೋತ್ಸವವು ಎ. 2 ರಿಂದ 8ರವರೆಗೆ ಜರಗಲಿದೆ. ಎ. 2ರಿಂದ 5ರವರೆಗೆ ಪ್ರತಿದಿನ ಧಾರ್ಮಿಕ ಕಾರ್ಯ ನಡೆಯಲಿದೆ.
ಎ. 6 ರಂದು ಬೆಳಗ್ಗೆ 9ರಿಂದ ಅನಂತನಾಥ ಸ್ವಾಮಿ ಸನ್ನಿಧಿಯಲ್ಲಿ ಮೇಗಿನನೆಲೆ ಶ್ರೀ ಚಂದ್ರನಾಥ ಸ್ವಾಮಿ ಸನ್ನಿಧಿಯಲ್ಲಿ ಮತ್ತು ಶ್ರೀ ಬ್ರಹ್ಮಯಕ್ಷ ದೇವರ ಸನ್ನಿಧಿಯಲ್ಲಿ ಪಂಚಾಮೃತ ಅಭಿಷೇಕ, ಮಹಾ ನೈವೇದ್ಯ ಪೂಜೆ, ಮಹಾ ಮಂಗಳಾರತಿ, ಸಂಜೆ 4.15 ರಿಂದ ಶ್ರೀ ಪೀಠ ಯಂತ್ರಾರಾಧನೆ, ರಾತ್ರಿ 8.15 ರಿಂದ ಭಗವಾನ್ ಶ್ರೀ ಆದಿನಾಥ ಸ್ವಾಮಿಗೆ ೫೪ ಕಲಶಗಳಿಂದ ಅಟ್ಟಳಗೆಯಲ್ಲಿ ಅಭಿಷೇಕ, ನಂತರ ಅಶ್ವಥಕಟ್ಟೆ ಪೂಜೆ, ಅರಮನೆ ಕಟ್ಟೆಪೂಜೆ, ಧ್ವಜಮರ ಕಟ್ಟೆಪೂಜೆ, ಮಕ್ಕಳ ಕಟ್ಟೆಪೂಜೆ ಮತ್ತು ಉತ್ಸವ ನಡೆಯುವುದು.
ಎ. 7 ರಂದು ರಥೋತ್ಸವದ ಅಂಗವಾಗಿ ಕಾರ್ಕಳ ಶ್ರೀ ಜೈನ ಮಠದ ಸ್ವಸ್ತಿ ಶ್ರೀ ಲಲತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಶ್ರೀ ಅನಂತನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕ, ಶ್ರೀ ಚಂದ್ರನಾಥ ಸ್ವಾಮಿಗೆ ಕ್ಷೀರಾಭಿಷೇಕ, ಶ್ರೀ ಬ್ರಹ್ಮಯಕ್ಷದೇವರ ಸನ್ನಿಧಿಯಲ್ಲಿ ಪಂಚಾಮೃತ ಅಭಿಷೇಕ, ಶ್ರೀ ಬಲಿ ವಿಧಾನ, ರಥ ಸಂಪ್ರೋಕ್ಷಣ, ಲಕ್ಷ ಹೂವಿನ ಪೂಜೆ, ಮಹಾ ನೈವೇದ್ಯ ಪೂಜೆ, ಮಹಾಮಂಗಳಾರತಿ, ಶ್ರೀ ಸರ್ವಾಹಯಕ್ಷನ ಶ್ರೀ ವಿಹಾರ, ಗ್ರಾಮ ಬಲಿ, ಮಧ್ಯಾಹ್ನ 12.35ಕ್ಕೆ ಶ್ರೀ ಬ್ರಹ್ಮಯಕ್ಷ ದೇವರ ದರ್ಶನ ಪಾತ್ರಿಯೊಂದಿಗೆ ಶ್ರೀ ಅನಂತನಾಥ ಸ್ವಾಮಿಯ ರಥಾರೋಹಣ. ರಾತ್ರಿ 7.30ಕ್ಕೆ ಸಮವಸರಣ ಪೂಜೆ, ರಥೋತ್ಸವ ನಂತರ ರಾತ್ರಿ ಶ್ರೀ ಅನಂತನಾಥ ಸ್ವಾಮಿಗೆ ೧೦೮ ಕಲಶಗಳಿಂದ ಮಹಾಭಿಷೇಕ ನಡೆಯುವುದು.

ಎ. 8 ರಂದು ರಾತ್ರಿ 8 ಕುಂಕುಮೋತ್ಸವ ಮತ್ತು ಧ್ವಜಾವರೋಹಣ, ಕಂಕಣ ವಿಸರ್ಜನೆ ನಡೆಯುವುದು.

















































































error: Content is protected !!
Scroll to Top