ಸಂಪಾದಕೀಯ- ಹಡಗು ಮುಳುಗುತ್ತಿರುವ ಹೊತ್ತು ….

ಕೋರೋನ ಎರಡನೇ ಅಲೆಯ ಅಬ್ಬರಕ್ಕೆ ದೇಶವೇ ನಲುಗಿ ಹೋಗಿದೆ. ಸಂತೃಸ್ತವಾದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಬಹಳ ಮುಂದೆ ಇದೆ. ರಾಜ್ಯದಲ್ಲಿ ಹೆಚ್ಚು ಸಾವು ನೋವು ಸಂಭವಿಸಿವೆ. ರಾಜಧಾನಿ ಬೆಂಗಳೂರು ಅಕ್ಷರಶಃ ಸ್ಮಶಾನ ಆಗಿದೆ. ಇಂತಹ ಸಂದರ್ಭದಲ್ಲಿ ವಿಧಾನ ಸಭೆಯ ಪಡಸಾಲೆಯಲ್ಲಿ ನಡೆಯುತ್ತಿರುವ ಅಹಿತಕರ ವಿದ್ಯಮಾನವನ್ನು ರಾಜ್ಯದ ಜನತೆ ಆತಂಕದಲ್ಲಿ ಗಮನಿಸುತ್ತಿದ್ದಾರೆ.

ಹಡಗು ಮುಳುಗುತ್ತಿರುವ ಸಂದರ್ಭದಲ್ಲಿ ನಾವಿಕನನ್ನು ಯಾರಾದ್ರೂ ಬದಲಾವಣೆ ಮಾಡ್ತಾರ? ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬದಲಾಯಿಸುವ ಒಂದು ಅತೃಪ್ತರ ಗುಂಪು ದೆಹಲಿಯಲ್ಲಿ ಬೀಡು ಬಿಟ್ಟಿದೆ. ರಾಜ್ಯದಲ್ಲಿ 10-15 ಹಿರಿ ಕಿರಿಯ ಶಾಸಕರು ಸಿಎಮ್ ಬದಲಾವಣೆ ಆಗಬೇಕು ಎನ್ನುವ ಹುನ್ನಾರದ ಸಭೆಗಳಲ್ಲಿ ಮಗ್ನ ಆಗಿದ್ದಾರೆ. ಏನಿದರ ಅರ್ಥ?

ಯಡಿಯೂರಪ್ಪ ಅವರಿಗೆ ಪ್ರಾಯ ಆಗಿದೆ. ಆದರೆ ಅವರ ಉತ್ಸಾಹ ಕುಂದಿಲ್ಲ. ಎರಡೆರಡು ಬಾರಿ ಅವರಿಗೆ ಕೋರೋನ ಆಘಾತ ಆಗಿದೆ. ಆದ್ರೆ ದಣಿದಿಲ್ಲ. ಕಾಲಿಗೆ ಚಕ್ರವನ್ನು ಕಟ್ಟಿ ಕೊಂಡವರಂತೆ ಅವರು ಹಗಲು ರಾತ್ರಿ ರಾಜ್ಯದ ಯೋಗ ಕ್ಷೇಮ ಚಿಂತನೆ ಮಾಡಿಕೊಂಡು ಕೆಲ್ಸ ಮಾಡ್ತಾ ಇದ್ದಾರೆ. ಅವರದೇ ಒಂದು ಕಾರ್ಯಪಡೆ ರಚಿಸಿ ಸಭೆಗಳನ್ನು ನಡೆಸುತ್ತಿದ್ದಾರೆ. ಇಡೀ ರಾಜ್ಯದ ಪರಿಸ್ಥಿತಿಯನ್ನು ಪ್ರತೀ ಕ್ಷಣ ಗಮನಿಸುತ್ತಿದ್ದಾರೆ.

ಈ ಬಾರಿಯ ಕೊರೋನಾ ಸವಾಲು ತುಂಬಾ ಕಠಿಣ ಆದದ್ದು. ಒಂದೆಡೆ ಹೊಸ ವೈದ್ಯರ ಮತ್ತು ಆರೋಗ್ಯ ಸಿಬ್ಬಂದಿಗಳ ನೇಮಕಾತಿ ಮಾಡಬೇಕು. ಇನ್ನೊಂದೆಡೆ ಪ್ರಾಣ ವಾಯು ಅಕ್ಸಿಜೆನ್ ಕೊರತೆ ಆಗಬಾರದು. ಇನ್ನೊಂದೆಡೆ ವೆಂಟಿಲೇಟರ್, ಐಸಿಯು ಕೊರತೆ, ಮತ್ತೊಂದೆಡೆ ಕೆಲವು ಖಾಸಗಿ ಆಸ್ಪತ್ರೆಗಳ ಅಸಹಾಕಾರ, ಇನ್ನೊಂದು ಕಡೆ ಆರ್ಥಿಕ ಮುಗ್ಗಟ್ಟು…. ಇವೆಲ್ಲದರ ನಡುವೆ ರಾಜ್ಯ ಸರ್ಕಾರ ಸಿಎಮ್ ಅವರ ನೇತೃತ್ವದಲ್ಲಿ ಇನ್ನಿಲ್ಲದ ಹೆಣಗಾಟ ಮಾಡ್ತಾ ಇದೆ. ಈ ಸಂದರ್ಭದಲ್ಲಿ ಮನೆಗೆ ಬೆಂಕಿ ಬಿದ್ದಾಗ ಯಾರೋ ಒಬ್ಬ ಬೀಡಿ ಹಚ್ಚಿದನಂತೆ ಎಂಬ ಗಾದೆಯ ಮಾತಿನಂತೆ ಅವಕಾಶವಾದ ಮಾಡುವವರನ್ನು ರಾಜ್ಯವು ಎಂದಿಗೂ ಕ್ಷಮಿಸುವುದಿಲ್ಲ.

ಇದು ಶತಮಾನದ ಕ್ರೈಸಿಸ್. ಆಗ ಇಡೀ ರಾಜ್ಯದ ಜನತೆ, ಸಚಿವ ಸಂಪುಟ, ವಿರೋಧ ಪಕ್ಷ, ಅಧಿಕಾರಿಗಳು, ಜನತೆ ಸರಕಾರದ ಪರವಾಗಿ ನಿಲ್ಲಬೇಕು. ಸಿಎಂ ಬದಲಾಯಿಸುವ ಹೊತ್ತು ಇದಲ್ಲ. ಅವಕಾಶವಾದಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು.
ಇಡೀ ನಾಡು ಕಂಡು ಕೇಳರಿಯದ ಗಂಡಾಂತರವನ್ನು ಅನುಭವಿಸುತ್ತಿರುವ ಹೊತ್ತಿನಲ್ಲಿ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ಈ ದುಸ್ಸಾಹಸ ಸಲ್ಲ.ಜನರು ಛೀ… ಥೂ…ಎನ್ನುವ ಮೊದಲು ಇದನ್ನು ಕೈಬಿಡಿ.

















































































error: Content is protected !!
Scroll to Top