ಕಾರ್ಕಳ : ಮನೆ ಸಮೀಪ ದಾರಿಯಲ್ಲಿ ನಡೆದುಕೊಂಡು ಬರುತ್ತಿರುವಾಗ ತನ್ನ ಗಂಡನನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಲಾಗಿದೆ ಎಂದು ಕುಕ್ಕುಂದೂರು ಗ್ರಾಮ ನಕ್ರೆಯ ಶಾಂತ ಎಂಬವರು ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮನೆ ಸಮೀಪ ವಾಸ್ತವ್ಯವಿರುವ ಸಂಬಂಧಿಕರಾದ ಸ್ಮಿತಾ ಹಾಗೂ ಸೀಮಾ ಅವರಲ್ಲಿ ಸುಖೇಶನು ನಿಮ್ಮ ಮನೆಗೆ ಯಾಕೆ ಬರುತ್ತಾನೆ ? ಎಂದು ಗಂಡ ಅವರಲ್ಲಿ ಕೇಳಿದಕ್ಕೆ ಸ್ಮಿತಾ, ಮಂಗಳಾ, ಸೀಮಾ, ಚುಮ್ಮು ಹಾಗೂ ಸುಖೇಶ ಸೇರಿಕೊಂಡು ಹಲ್ಲೆ ನಡೆಸಿರುತ್ತಾರೆ. ಹಗ್ಗದಿಂದ ಮರಕ್ಕೆ ಕಟ್ಟಿ ಹಾಕಿ ಕೈ, ಕಾಲು, ತಲೆಗೆ ಹೊಡೆದಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕುಕ್ಕುಂದೂರು : ಮರಕ್ಕೆ ಕಟ್ಟಿ ಹಾಕಿ ಹಲ್ಲೆ-ದೂರು








































