ಅವೈಜ್ಞಾನಿಕ ಎಣ್ಣೆಹೊಳೆ ಯೋಜನೆಯಿಂದ ಹಲವಾರು ಕುಟುಂಬಗಳಿಗೆ ಸಂಕಷ್ಟ -ಮಂಜುನಾಥ ಪೂಜಾರಿ

ಕಾರ್ಕಳ : ಅವೈಜ್ಞಾನಿಕವಾಗಿ ನಿರ್ಮಾಣವಾಗುತ್ತಿರುವ ಎಣ್ಣೆಹೊಳೆ ಏತ ನೀರಾವರಿ ಯೋಜನೆಯಿಂದ ಹಲವಾರು ಕುಟಂಬಗಳಿಗೆ ತೊಂದರೆಯಾಗಲಿದೆ. ಇಂತಹ ಜನ ವಿರೋಧಿ ಯೋಜನೆಯನ್ನು ಕೈಬಿಡುವಂತೆ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ ಆಗ್ರಹಿಸಿದರು.
ನಗರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ಕಳೆದ ವರ್ಷ ಮತ್ತು ಈ ವರ್ಷ ಹೆಚ್ಚು ಮಳೆ ಬಂದ ಸಂದರ್ಭ ಎಣ್ಣೆಹೊಳೆ ಆಸುಪಾಸು ನೀರು ನುಗ್ಗಿದೆ. ಯೋಜನೆಗೆ ಪೂರಕವಾಗಿ ತೋಡುಗಳಿಗೆ ತಡೆಗೋಡೆ ಕಟ್ಟಿದ್ದು, ಚೆಕ್ ಡ್ಯಾಂಗಳಿಂದ ರೈತರ ತೋಟ, ಗದ್ದೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಈ ಕುರಿತು ಸಂಬಂಧಪಟ್ಟ ಇಲಾಖಾಧಿಕಾರಿಗಳು ತನಿಖೆ ನಡೆಸಿ ಕ್ರಮಕೈಗೊಳ್ಳಬೇಕೆಂದರು.

ಅಲ್ಲಲ್ಲಿ ಅನಗತ್ಯ ಕಿಂಡಿ ಅಣೆಕಟ್ಟು
ಹೆಬ್ರಿ ಮತ್ತು ಕಾರ್ಕಳ ತಾಲೂಕುಗಳಲ್ಲಿ ಅಲ್ಲಲ್ಲಿ ಅನಗತ್ಯವಾಗಿ ಅಲ್ಲಲ್ಲಿ ಕಿಂಡಿ ಅಣೆಕಟ್ಟು, ಕಾಲು ಸಂಕ, ಕಿರು ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಅವಶ್ಯವಾದ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದು ಬಿಟ್ಟು ಜನರ ತೆರಿಗೆಯ ಹಣ ಈ ರೀತಿ ಲೂಟಿಯಾಗುವುದು ಸರಿಯಲ್ಲ. ಕಳಪೆ ಕಮಗಾರಿಯ ಜೊತೆಗೆ ಜನರಿಗೆ ಅನುಕೂಲವಾಗುವ ಬದಲು ಇದರಿಂದ ಕಂಟಕವಾಗುತ್ತಿದೆ. ಇಂತಹ ಯೋಜನೆಗಳನ್ನು ತಕ್ಷಣ ನಿಲ್ಲಿಸಬೇಕು. ಕೊರೊನಾ ಸಂಕಷ್ಟ ಕಾಲದಲ್ಲಿ ಕಾಮಗಾರಿ ಬೇಡ. ಆರೋಗ್ಯಕ್ಕೆ ಪ್ರಾಶಸ್ತ್ಯ ನೀಡಬೇಕು. ಜನರಿಗೆ ತೊಂದರೆಯಾಗುವ ಕಾಮಗಾರಿಗಳನ್ನು ನಿಲ್ಲಸದಿದ್ದರೆ ಕೊರೋನಾ ಎಂದು ನೋಡದೇ ಪ್ರತಿಭಟನೆ ನಡೆಸಲಾಗುವುದು ಎಂದವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಕಾಂಗ್ರೆಸ್ ಜಿಲ್ಲಾ ವಕ್ತಾರ ಬಿಪಿನ್ ಚಂದ್ರ ಪಾಲ್, ಜಾನ್ ಟೆಲ್ಲಿಸ್, ರಾಮಣ್ಣ ಶೆಟ್ಟ, ದಿನೇಶ್ ಶೆಟ್ಟಿ, ಪ್ರಕಾಶ ಪೂಜಾರಿ ಉಪಸ್ಥಿತರಿದ್ದರು.

















































































error: Content is protected !!
Scroll to Top