ಕುಡಿದ ಮತ್ತಿನಲ್ಲಿ ಕಟ್ಟಿಗೆಯಿಂದ ಹೊಡೆದು ಪತ್ನಿಯ ಕೊಲೆ-ಆರೋಪಿ ಬಂಧನ

ಬೆಳ್ತಂಗಡಿ: ಪತಿಯು ಕಟ್ಟಿಗೆಯಿಂದ ಹೊಡೆದು ಪತ್ನಿಯ ಕೊಲೆ ಗೈದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯಾ ಗಂಡಿಬಾಗಿಲು ಸಮೀಪ ನಿನ್ನೆ ರಾತ್ರಿ ನಡೆದಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ನೆರಿಯಾ ಗ್ರಾಮದ ಗಂಡಿಬಾಗಿಲು ನಿವಾಸಿ ಜಾನ್ಸನ್(47)‌ ಬಂಧಿತ ಆರೋಪಿ ಪತಿ, ಸೌಮ್ಯಾ ಫ್ರಾನ್ಸಿಸ್(40)‌ ಕೊಲೆಯಾದ ಮಹಿಳೆ. ಪತಿ-ಪತ್ನಿ ಇಬ್ಬರೂ ರಬ್ಬರ್‌ ಟ್ಯಾಪಿಂಗ್‌ ವೃತ್ತಿ ನಡೆಸುತ್ತಿದ್ದರು. ಇಬ್ಬರ ನಡುವೆ ಪ್ರತಿನಿತ್ಯ ಜಗಳ ಸಾಮಾನ್ಯವಾಗಿತ್ತು.
ಗುರುವಾರ ಇವರ ಇವರ ಜಗಳ ವಿಕೋಪಕ್ಕೆ ತಿರುಗಿ ಜಾನ್ಸನ್‌ ಕಟ್ಟಿಗೆಯ ತುಂಡಿನಿಂದ ಸೌಮ್ಯರವರಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಇದರಿಂದ ಗಂಭೀರ ಗಾಯಗೊಂಡ ಸೌಮ್ಯಾ ಕುಸಿದು ಬಿದ್ದರೆನ್ನಲಾಗಿದೆ.
ಈ ಬಗ್ಗೆ ಸೌಮ್ಯಾ ಅವರ ಸಹೋದರ ಸನೋಜ್‌ ಫ್ರಾನ್ಸಿಸ್‌ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.









































































































error: Content is protected !!
Scroll to Top