ಹಕ್ಕಿ ಜ್ವರ ಭೀತಿ: ದಕ್ಷಿಣ ಕನ್ನಡದಲ್ಲಿ ತೀವ್ರ ಕಟ್ಟೆಚ್ಚರ-ಕೇರಳ ಕೋಳಿ ಸಾಗಾಟ ವಾಹನಗಳ ಮೇಲೆ ನಿರ್ಬಂಧ

ಮಂಗಳೂರು: ಕೇರಳದಿಂದ ಹಕ್ಕಿ ಜ್ವರ ಪಸರಿಸದಂತೆ ಮುಂಜಾಗ್ರತಾ ಕ್ರಮವಾಗಿ ಕೇರಳದಿಂದ ಕರ್ನಾಟಕಕ್ಕೆ ಕೋಳಿ ಸಾಗಾಟಕ್ಕೆ ಗಡಿ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧವನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ವಿಧಿಸಿದೆ. ಈ ಮೂಲಕ ಕಟ್ಟೆಚ್ಚರ ವಹಿಸಲಾಗಿದೆ. 

ಹಕ್ಕಿ ಜ್ವರ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ರೋಗ ನಿಯಂತ್ರಣ ಸಮಿತಿ ರಚಿಸಲಾಗಿದೆ. ಕೇರಳದ ಕೊಟ್ಟಾಯಂನಲ್ಲಿ ಬಾತುಕೋಳಿಗಳು ಶಂಕಿತ ಹಕ್ಕಿ ಜ್ವರದಿಂದ ಸಾವಿಗೀಡಾದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. 

ಅಲ್ಲಿಂದ ಮಂಗಳೂರಿಗೆ ಹಕ್ಕಿ ಜ್ವರ ಪಸರಿಸುವ ಸಾಧ್ಯತೆ ಬಹಳಷ್ಟು ಕಡಿಮೆ. ಜಿಲ್ಲೆಯ ಕೋಳಿ ಫಾರಂಗಳಲ್ಲಿ ಜ್ವರ ತಪಾಸಣೆ ನಡೆಸುವಂತೆ ಸೂಚನೆ ನೀಡಲಾಗಿದೆ. ಜಿಲ್ಲಾಡಳಿತ ಹೆಲ್ಪ್ ಲೈನ್ ತೆರೆದಿದ್ದು, ಸಾರ್ವಜನಿಕರು ಹಕ್ಕಿ ಜ್ವರಕ್ಕೆ ಸಂಬಂಧಿಸಿ ನೇರವಾಗಿ ಮಾಹಿತಿ ನೀಡಬಹುದಾಗಿದೆ. ಜಿಲ್ಲೆಯಿಂದ ಕೇರಳಕ್ಕೆ ಕೋಳಿ ಸಾಗಾಟ ಮಾಡಿದರೆ ಸಮಸ್ಯೆಯಾಗದು. ಮರಳಿ ಜಿಲ್ಲೆಗೆ ಆಗಮಿಸುವ ಕೋಳಿ ಸಾಗಾಟ ವಾಹನವನ್ನು ಪರ್ತಿಯಾಗಿ ಸ್ಯಾನಿಟೈಸ್ ಮಾಡಲಾಗುವುದು. ಆದರೆ, ಕೇರಳದಿಂದ ಇಲ್ಲಿಗೆ ಬಾತುಕೋಳಿ ಕೂಡ ಸಾಗಾಟ ಮಾಡುವಂತಿಲ್ಲ. ಜಿಲ್ಲೆಯ ಜಾಲ್ಸೂರು, ಸಾರಡ್ಕ, ತಲಪಾಡಿ ಹಾಗೂ ಕೊಣಾಜೆಯ ತೌಡುಗೋಳಿ ಗಡಿಗಳಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಿ ಬಿಗು ತಪಾಸಣೆ ನಡೆಸಲಾಗುತ್ತಿದೆ ಎಂದರು. 









































































































error: Content is protected !!
Scroll to Top