ಸಿಡ್ನಿಯಲ್ಲಿ ಸಮಬಲದ ಹೋರಾಟ: ಗಿಲ್‌ ಅರ್ಧಶತಕ-ರೋಹಿತ್‌ ನಿರಾಸೆ

ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಉಭಯ ತಂಡಗಳು ಸಮಬಲದ ಹೋರಾಟ ನಡೆಸುತ್ತಿದೆ.
ಸದ್ಯ ದ್ವಿತೀಯ ದಿನದಾಟದ ಅಂತ್ಯಕ್ಕೆ ಭಾರತ ತಂಡ ಎರಡು ವಿಕೆಟ್‌ ನಷ್ಟಕ್ಕೆ 96 ರನ್‌ ಗಳಿಸಿದೆ.
ಹೊಸ ಆರಂಭಿಕ ಜೋಡಿಯೊಂದಿಗೆ ಕಣಕ್ಕಿಳಿದ ಭಾರತ ತಂಡಕ್ಕೆ ಉತ್ತಮ ಆರಂಭವೇ ಸಿಕ್ಕಿತು. ರೋಹಿತ್‌-ಗಿಲ್‌ ಮೊದಲ ವಿಕೆಟ್‌ ಗೆ 70 ರನ್‌ ಒಟ್ಟು ಗೂಡಿಸಿದರು. ಯುವ ಆಟಗಾರ ಗಿಲ್‌ ತಮ್ಮ ಮೊದಲ ಅರ್ಧಶತಕ ಬಾರಿಸಿದರು. ಆದರೆ ರೋಹಿತ್‌ ಶರ್ಮಾ 26 ರನ್‌ ಗಳಿಸಿ ಔಟಾಗಿ ನಿರಾಸೆ ಮೂಡಿಸಿದರು.
ಸದ್ಯ ಪೂಜಾರ (9 ರನ್)‌ ಮತ್ತು ನಾಯಕ ರಹಾನೆ (5 ರನ್)‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದೆ. ಭಾರತ ಸದ್ಯ 242 ರನ್‌ ಹಿನ್ನಡೆಯಲ್ಲಿದೆ.









































































































error: Content is protected !!
Scroll to Top