ಆರೋಗ್ಯಧಾರ-ಬೆಲ್ಲದ ಉಪಯೋಗ

ಬೆಲ್ಲವನ್ನು ಕಬ್ಬಿನಿಂದ ತಯಾರಿಸುತ್ತಾರೆ. ಕಬ್ಬಿನ ಹಾಲನ್ನು ಬಿಸಿ ಮಾಡಿದಾಗ ಬೆಲ್ಲ ದೆೊರೆಯುತ್ತದೆ.
ಯಾವುದೆೇ ರಾಸಾಯನಿಕ ಬಳಸದೆ ಮಾಡಿದಂತಹ ಗಾಢ ಬಣ್ಣದ ಬೆಲ್ಲವು ಆರೋಗ್ಯದಾಯಕ. ಸಂಸ್ಕೃತದಲ್ಲಿ ಬೆಲ್ಲವನ್ನು ಗುಡ ಎಂದು ಕರೆಯುತ್ತಾರೆ.
ಹೆೊಸ ಬೆಲ್ಲ ಹಾಗೂ ಹಳೆಯ ಬೆಲ್ಲದ ಗುಣಗಳಲ್ಲಿ ವ್ಯತ್ಯಾಸವಿದೆ. ಹೆೊಸ ಬೆಲ್ಲವು ಕಫವನ್ನು ಕುಪಿತಗೆೊಳಿಸಿ ಅಜೀರ್ಣಕ್ಕೆ ಕಾರಣವಾಗುತ್ತದೆ. ಹಳೆಯ ಬೆಲ್ಲದ ಉಪಯೋಗಗಳು ಅಪಾರ. ಹಳೆಯ ಬೆಲ್ಲ ಎಂದರೆ ಒಂದು ವರ್ಷ ಹಳೆಯದಾಗಿರಬೆೇಕು.
ಹಳೆಯಬೆಲ್ಲವು ಸಿಹಿರಸ, ಜಿಡ್ಡು, ಹಗುರ ಹಾಗೂ ಜೀರ್ಣಕಾರಕ ಗುಣದಿಂದ ಕೂಡಿದೆ. ಕರುಳನ್ನು, ಮೂತ್ರಪಿಂಡವನ್ನು, ಹಾಗೂ
ಹೆೊಟ್ಟೆಯನ್ನು ಶುದ್ಧಗೊಳಿಸುತ್ತದೆ. ಬಾಯಿ ರುಚಿಯನ್ನು ಹೆಚ್ಚಿಸುತ್ತದೆ. ಹೃದಯಕ್ಕೆ ಬಹಳ ಉತ್ತಮ. ಮೂರು ದೋಷಗಳನ್ನು ವಿಶೆೇಷವಾಗಿ ವಾತ ಹಾಗೂ ಪಿತ್ತವನ್ನು ಸಮತೋಲನ ಗೊಳಿಸುತ್ತದೆ.
ಜ್ವರ, ನೆಗಡಿ, ಹಾಗೂ ಆಯಾಸವನ್ನು ದೂರ ಮಾಡುತ್ತದೆ. ಅನಿಮಿಯಾ ಹಾಗೂ ಮೂತ್ರಪಿಂಡ ಕಾಯಿಲೆಗಳನ್ನು ದೂರಮಾಡುತ್ತದೆ.
ಸಕ್ಕರೆಗಿಂತ ಬೆಲ್ಲ ಅತ್ಯುತ್ತಮ ಹಾಗೂ ಆರೋಗ್ಯದಾಯಕ. ಸ್ವೀಟ್ಸ್, ಜ್ಯೂಸ್,‌ ಟೀ, ಕಾಫಿಗೆ ಸಕ್ಕರೆಯ ಬದಲಿಗೆ ಬೆಲ್ಲವನ್ನು ಉಪಯೋಗಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
ಕೆಲವು ಆಯುರ್ವೇದ ಔಷಧದ ತಯಾರಿಕೆಯಲ್ಲಿ ಬೆಲ್ಲವನ್ನು ಬಳಸುತ್ತಾರೆ. ಉದಾಹರಣೆಗೆ ಆಸವ, ಅರಿಷ್ಟ, ಸಿರಪ್, ಕಷಾಯ, ಗುಳಿಗೆಯ ತಯಾರಿಕೆಯಲ್ಲಿ ಬೆಲ್ಲವನ್ನು ಉಪಯೋಗಿಸುತ್ತಾರೆ.
‌

ಬೆಲ್ಲವನ್ನು ಹೀಗೆ ಉಪಯೋಗಿಸಿ–

  1. ವಾತಾವರಣದಲ್ಲಿ ಉಷ್ಣಾಂಶ ಅಧಿಕವಿದ್ದಾಗ, ಬೇಸಿಗೆಯಲ್ಲಿ ಅಥವಾ ಮಧ್ಯಾಹ್ನದ  ಸಮಯದಲ್ಲಿ ಬೆಲ್ಲ ಹಾಗೂ ನೀರನ್ನು ಸೇವಿಸಿದರೆ, ಅದು ನಮ್ಮ ದೇಹವನ್ನು ತಂಪುಗೊಳಿಸುವುದಲ್ಲದೆ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ..
  2. ವಾತ ಹಾಗೂ ಕಫ ರೋಗಗಳಲ್ಲಿ ಬೆಲ್ಲವನ್ನು ಶುಂಠಿಯ ಜೊತೆ ಸೇವಿಸುವುದರಿಂದ ಲಾಭವು ಅಧಿಕ. ಕೆಮ್ಮು, ನೆಗಡಿ, ಜ್ವರದಿಂದ ಬಳಲಿದಾಗ ಬೆಲ್ಲದಿಂದ ತಯಾರಿಸಿದ ಪಾನಕ ಅಥವಾ ಕಷಾಯವನ್ನು ಸೇವಿಸುವುದು ಲಾಭದಾಯಕ.
  3. ಬೆಲ್ಲವನ್ನು ಸೇವಿಸುವುದರಿಂದ ರೋಗ ನಿರೋಧಕಶಕ್ತಿ ಹೆಚ್ಚುತ್ತದೆ.
  4. ಹಾಲಿನಲ್ಲಿ ಬೆಲ್ಲಬೆರೆಸಿ ಸೇವಿಸಿದಾಗ ದುರ್ಬಲತೆಯೂ ದೂರವಾಗುತ್ತದೆ ಹಾಗೂ ಮೂಳೆಗಳು ಹಾಗೂ ಸಂದುಗಳು ಸದೃಢಗೊಳ್ಳುತ್ತದೆ.
  5. ಬೆಲ್ಲವು ಕರುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ಮಲಬದ್ಧತೆಯನ್ನು ದೂರ ಮಾಡುತ್ತದೆ .
  6. ಆಹಾರಸೇವಿಸಿದ ಬಳಿಕ ಒಂದು ತುಂಡುಬೆಲ್ಲ, ಒಂದು ಚಿಟೆಕೆ ಕರಿಮೆಣಸಿನಪುಡಿ, ಮೂರು ಚಿಟಿಕೆ ಒಣಶುಂಠಿಪುಡಿ, ಒಂದು ಚಮಚ ಜೇನುತುಪ್ಪವನ್ನು ಬೆರೆಸಿ,  ದಿನಕ್ಕೆ ಮೂರುಹೊತ್ತು ಸೇವಿಸಿದರೆ ನೆಗಡಿ ದೂರವಾಗುವುದು .
  7. ಒಂದು ಬೆಲ್ಲದ ತುಂಡು, ಮೂರು ಚಿಟಿಕೆ ಒಣ ಶುಂಠಿಪುಡೆಯನ್ನು ಬಿಸಿನೀರಿನ ಜೊತೆ ಸೇವಿಸಿದಾಗ ಬಿಕ್ಕಳಿಕೆ ಹಾಗೂ ಸಂದು ನೋವುಕಡಿಮೆಯಾಗುತ್ತದೆ.
  8. ಎರಡು ಚಮಚಬೆಲ್ಲ, ಒಂದು ಚಮಚ ಹಸುವಿನ ತುಪ್ಪಬೆರೆಸಿ ದಿನಕ್ಕೆ ಎರಡುಹೊತ್ತು ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ ಮೈಗ್ರೇನ್ ತಲೆನೋವು ದೂರವಾಗುತ್ತದೆ.
  9. ಊಟವಾದ ಬಳಿಕ ಒಂದು ಬೆಲ್ಲದ ತುಂಡನ್ನು ಸೇವಿಸುವುದರಿಂದ ವಾಯುವು( flatulence) ಕಡಿಮೆಗೊಳ್ಳುತ್ತದೆ.
  10. ಸಕ್ಕರೆ ಕಾಯಿಲೆ ಇದ್ದವರಿಗೆ ಸಕ್ಕರೆಯ ಬದಲಾಗಿ ಬೆಲ್ಲ ಉಪಯೋಗಿಸುವುದುಹಿತಕರ. ಆದರೆ ಅಲ್ಪ ಪ್ರಮಾಣದಲ್ಲಿ ಸೇವಿಸಿರಿ. ಅಧಿಕ ಸೇವಿಸದಿರಿ.
  11. ಬೆಲ್ಲವು ಹೃದಯಕ್ಕೆಹಾಗೂ ಯಕೃತ್ತಿಗೆ  ಒಳ್ಳೆಯದು. ರಕ್ತವನ್ನು ಶುದ್ಧೀಕರಿಸುತ್ತದೆ. ಬೆಲ್ಲದಲ್ಲಿಐಯನ್, ಫಾಸ್ಪರಸ್, ಕ್ಯಾಲ್ಸಿಯಂ ಇದೆ.
  12. ಚಳಿಗಾಲದಲ್ಲಿ ಬೆಲ್ಲವನ್ನು ಉಪಯೋಗಿಸಿದರೆ ದೇಹಕ್ಕೆ ಬೇಕಾಗುವ ಉಷ್ಣಾಂಶವು ದೊರೆಯುತ್ತದೆ. ಬೆಲ್ಲದಿಂದ ತಯಾರಿಸಿದ ಆಹಾರವನ್ನು ಸೇವಿಸಿ. ಬೆಲ್ಲದ ಜೊತೆ ನೆಲಕಡಲೆ ಸೇವಿಸುವುದು ಅಥವಾ ಬೆಲ್ಲ ಮತ್ತು ಎಳ್ಳು ಸೇವಿಸುವುದು ಆರೋಗ್ಯಕರ.
  13. ಅಲ್ಸರೇಟಿವ್ ಕೊಲೈಟಿಸ್, ಉರಿಯೂತ ,ಅಧಿಕ ಬೊಜ್ಜು ಇರುವವರು ಬೆಲ್ಲವನ್ನುಕಡಿಮೆ ಸೇವಿಸಿರಿ.

ಡಾ| ಹರ್ಷಾ ಕಾಮತ್















































































error: Content is protected !!
Scroll to Top