ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಅಬ್ದುಲ್‌ ನಝೀರ್‌ ಅವರಿಂದ ಕೋರ್ಟ್‌ ಕಟ್ಟಡ ವೀಕ್ಷಣೆ

ಕಾರ್ಕಳ : ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎಸ್. ಅಬ್ದುಲ್‌ ನಝೀರ್‌ ಅವರು ಡಿ. 25ರ ಸಂಜೆ ಕಾರ್ಕಳಕ್ಕೆ ಭೇಟಿ ನೀಡಿ ನೂತನ ಕೋರ್ಟ್‌ ಕಟ್ಟಡವನ್ನು ವೀಕ್ಷಿಸಿದರು. ಕಾಮಗಾರಿ ಬಹುತೇಕ ಪೂರ್ಣಗೊಂಡು ಉದ್ಘಾಟನೆಗಾಗಿ ಸಿದ್ಧಗೊಂಡಿರುವ ಕೋರ್ಟ್‌ ಕಟ್ಟಡವನ್ನು ವೀಕ್ಷಿಸಿದ ನ್ಯಾಯಮೂರ್ತಿಯವರು ಕಟ್ಟಡ ಕಾಮಗಾರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಗಾರ್ಡನ್‌ ನಿರ್ಮಿಸಲು ಸೂಚನೆ
ಕೋರ್ಟ್‌ ಆವರಣದಲ್ಲಿ ಗಿಡಗಳನ್ನು ಬೆಳೆಸಿ ಗಾರ್ಡನ್‌ ನಿರ್ಮಿಸುವಂತೆ ಲೋಕೋಪಯೋಗಿ ಇಲಾಖಾ ಇಂಜಿನಿಯರ್‌ ಅವರಿಗೆ ತಿಳಿಸಿದರು. ಹಿರಿಯ ಸಿವಿಲ್‌ ನ್ಯಾಯಾಧೀಶೆ ರೂಪಶ್ರೀ, ಸಿವಿಲ್‌ ನ್ಯಾಯಾಧೀಶ ಸತೀಶ್‌ ಬಿ., ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್‌ ಎಸ್.ಕೆ. ಅಶೋಕ್‌, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ಎಚ್.‌ಕೆ. ಸುಂದರ್‌, ಸಹಾಯಕ ಇಂಜಿನಿಯರ್‌ ಸೋಮಶೇಖರ್‌, ವಕೀಲರ ಸಂಘದ ಅಧ್ಯಕ್ಷ ಸನತ್‌ ಕುಮಾರ್‌ ಜೈನ್‌, ಕಾರ್ಯದರ್ಶಿ ಪದ್ಮಪ್ರಸಾದ್‌ ಜೈನ್‌ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಫೆಬ್ರವರಿಯಲ್ಲಿ ಉದ್ಘಾಟನೆ
15 ಕೋಟಿ ರೂ. ವೆಚ್ಚದ ನೂತನ ಕಟ್ಟಡ ಫೆಬ್ರವರಿ ಪ್ರಥಮ ವಾರದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಲೋಕೋಪಯೋಗಿ ಇಲಾಖೆಯವರು ತಿಳಿಸಿದರು.















































































error: Content is protected !!
Scroll to Top