ಸಾಣೂರು ಹಾಲು ಉತ್ಪಾದಕರ ಸಹಕಾರ ಸಂಘ ಸಾಮಾನ್ಯ ಸಭೆ

ಕಾರ್ಕಳ : ಸಾಣೂರು ಹಾಲು ಉತ್ಪಾದಕರ ಸಹಕಾರ ಸಂಘ ಇದರ 2019- 20 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಡಿ. 22ರಂದು ಸಾಣೂರು ಸುವರ್ಣ ಗ್ರಾಮೋದಯ ಸೌಧದಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ದ.ಕ. ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕ, ಸಂಘದ ಅಧ್ಯಕ್ಷರಾದ ಸಾಣೂರು ನರಸಿಂಹ ಕಾಮತ್, ವೈಜ್ಞಾನಿಕ ರೀತಿಯ ಹೈನುಗಾರಿಕೆಯಿಂದ ಗ್ರಾಮೀಣ ಭಾಗದ ಜನರ ಜೀವನ ಮಟ್ಟದಲ್ಲಿ ಆರ್ಥಿಕ ಸುಧಾರಣೆ ಸಾಧ್ಯ. ಒಕ್ಕೂಟದಿಂದ ಸಿಗುವ ವಿವಿಧ ರೀತಿಯ ಪ್ರೋತ್ಸಾಹಕ ಯೋಜನೆಗಳನ್ನು ಸದಸ್ಯರು ಸಮರ್ಪಕವಾಗಿ ಸದುಪಯೋಗ ಪಡಿಸಿಕೊಳ್ಳಬೇಕು. ಸಾಮೂಹಿಕ ಜಾನುವಾರು ವಿಮೆ ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಸೌಲಭ್ಯವನ್ನೂ ಹೈನುಗಾರರು ಪಡೆಯುವಂತೆ ತಿಳಿಸಿದರು.

ಸಂಘದ ಕಾರ್ಯದರ್ಶಿ ಜ್ಞಾನದೇವ ವರದಿ ವಾಚಿಸಿದರು. ಒಕ್ಕೂಟದ ಪಶುವೈದ್ಯರಾದ ಡಾ. ಶೀತಲ್ ಕುಮಾರ್ ರಾಸುಗಳ ನಿರ್ವಹಣೆ, ಲವಣ ಮಿಶ್ರಣದ ಮಹತ್ವ, ಗುಣಮಟ್ಟದ ಹಾಲು ಉತ್ಪಾದನೆಯ ಬಗ್ಗೆ ಮತ್ತು ವಿಸ್ತರಣಾಧಿಕಾರಿ ಶಮೀರ್ ಹೈನುಗಾರಿಕೆ ಅಭಿವೃದ್ಧಿಗಾಗಿ ಹಸಿರು ಮೇವು ಪ್ರೋತ್ಸಾಹಕ ಯೋಜನೆ, ಜಾನುವಾರು ವಿಮೆ, ಇನ್ನಿತರ ಒಕ್ಕೂಟದ ಯೋಜನೆಗಳ ಮಾಹಿತಿ ನೀಡಿದರು. ಸಂಘದ ಸದಸ್ಯರಿಗೆ 15 ಶೇ. ಡಿವಿಡೆಂಡ್‌, ಒಟ್ಟು ರೂ. 65, 755 ಬೋನಸ್ ನೀಡಲಾಯಿತು. ನಿರ್ದೇಶಕರುಗಳಾದ ಕೊರಗ ಶೆಟ್ಟಿ, ಶ್ರೀಧರ ಸಮಗಾರ, ಉಮಾನಾಥ ಶೆಟ್ಟಿ, ವಿಶ್ವನಾಥ್ ಶೆಟ್ಟಿಗಾರ್, ಮುದೆಲಾಡಿ ಪ್ರವೀಣ ಶೆಟ್ಟಿ, ಜಯಾನಂದ ಮೂಲ್ಯ, ಸುಗಂಧಿ ನಾಯಕ, ಸಂಜೀವಿ, ರಾಯಲ್ ನೂರೋನ್ನ, ಹಾಲು ಪರೀಕ್ಷಕ ಗುರುಪ್ರಸಾದ್, ಸ್ವಚ್ಛತಾ ಸಿಬ್ಬಂದಿ ಜಯಂತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರತಿಭಾ ಪುರಸ್ಕಾರ-ಸನ್ಮಾನ
ಕಳೆದ ಸಾಲಿನ ಎಸ್.ಎಸ್.ಎಲ್.ಸಿ., ಪಿಯುಸಿ ಮತ್ತು ಪದವಿ ಶಿಕ್ಷಣದಲ್ಲಿ ಅತ್ಯಧಿಕ ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ನಗದು ಬಹುಮಾನ ಪುರಸ್ಕಾರ ನೀಡಿ ಗೌರವಿಸಲಾಯಿತು. ರಾಜ್ಯ ಮಟ್ಟದ ಅತ್ಯುತ್ತಮ ಯುವಕ ಮಂಡಲ ಪ್ರಶಸ್ತಿ ವಿಜೇತ ಸಾಣೂರು ಯುವಕ ಮಂಡಲಕ್ಕೆ ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ಯಶೋಧ ಆರ್. ಸುವರ್ಣ ಸ್ವಾಗತಿಸಿ, ನಿರ್ದೇಶಕ ಜಯ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕರಾದ ಸೋಮಶೇಖರ್ ವಂದಿಸಿದರು.









































































































error: Content is protected !!
Scroll to Top