ಕಾರ್ಕಳ : ನೆಹರು ಯುವ ಕೇಂದ್ರ ಕೊಡಮಾಡುವ ರಾಜ್ಯಮಟ್ಟದ ಅತ್ಯುತ್ತಮ ಯುವಕ ಮಂಡಲ ಪ್ರಶಸ್ತಿಗೆ ಸಾಣೂರು ಯುವಕ ಮಂಡಲ ಆಯ್ಕೆಯಾಗಿದೆ. ಪ್ರಶಸ್ತಿಯು 75 ಸಾವಿರ ರೂ. ನಗದು, ಪ್ರಶಂಸ ಪತ್ರ ಒಳಗೊಂಡಿದ್ದು ಜ. 23 ರಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಶಸ್ತಿ ವಿತರಿಸಲಿದ್ದಾರೆ ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ವಿಲ್ಫ್ರೆಡ್ ಡಿʼಸೋಜಾ ತಿಳಿಸಿದ್ದಾರೆ.
67 ನೇ ವರ್ಷಾಚರಣೆಯಲ್ಲಿರುವ ಸಾಣೂರು ಯುವಕ ಮಂಡಲವು ಸಾಣೂರು ಗ್ರಾಮಕ್ಕೆ ಮೂಲಭೂತ ಸೌಕರ್ಯಗಳಾದ ಸಾರ್ವಜನಿಕ ಶೌಚಾಲಯ, ಹಿಂದೂ ರುದ್ರಭೂಮಿ, ಮಾಹಿತಿ ಸಿಂಧು ಕಂಪ್ಯೂಟರ್ ಕೊಠಡಿ, ಬಸ್ ತಂಗುದಾಣ ನಿರ್ಮಾಣ, ಮದ್ಯವರ್ಜನ ಶಿಬಿರ, ಮಕ್ಕಳಿಗೆ ಯಕ್ಷಗಾನ ತರಬೇತಿ, ವೈದ್ಯಕೀಯ ಶಿಬಿರ, ಶೈಕ್ಷಣಿಕ ಕಾರ್ಯಾಗಾರ, ಪರಿಸರ ಕಾಳಜಿ ಸಂಬಂಧಿಸಿದ ಮಾಹಿತಿ, ವನ ಮಹೋತ್ಸವ, ಸ್ವಚ್ಛತಾ ಅಭಿಯಾನ ಹೀಗೆ ಹತ್ತಾರು ಕಾರ್ಯಕ್ರಮವನ್ನು ಸಂಘಟಿಸಿತ್ತು. ಈ ಎಲ್ಲ ಸೇವೆಗಳನ್ನು ಪರಿಗಣಿಸಿ ಸಾಣೂರು ಯುವಕ ಮಂಡಲಕ್ಕೆ ರಾಜ್ಯ ಮಟ್ಟದ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ 2019/20 ಲಭಿಸಿದೆ.
ಸಾಣೂರು ಯುವಕ ಮಂಡಲಕ್ಕೆ ರಾಜ್ಯ ಮಟ್ಟದ ಪ್ರಶಸ್ತಿ






































