ಕಾರ್ಕಳ : ಕುಕ್ಕುಂದೂರು ಗ್ರಾಮದ ಜಾರ್ಕಳದ ರಾಜು ಎಂಬವರ ಪುತ್ರಿ ಪಲ್ಲವಿ ನಾಪತ್ತೆಯಾಗಿರುವ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಡಿ. 15ರ ಮಧ್ಯಾಹ್ನ ಯಾರಲ್ಲೂ ಹೇಳದೇ ಮನೆಯಿಂದ ತೆರಳಿದ ಬಾಲಕಿ ಬಳಿಕ ಮನೆಗೆ ವಾಪಸ್ಸಾಗಿಲ್ಲ. ಸಂಬಂಧಿಕರ ಮನೆಗೂ ಹೋಗಿಲ್ಲ ಎಂದು ಬಾಲಕಿ ಅಕ್ಕ ಅನಿತಾ ಅವರು ದೂರು ನೀಡಿರುತ್ತಾರೆ. 13 ವರ್ಷ ವಯಸ್ಸಿನ ಬಾಲಕಿ 9ನೇ ತರಗತಿ ವಿದ್ಯಾರ್ಥಿನಿ.
ಬಾಲಕಿ ನಾಪತ್ತೆ






























































