ಕ್ರಿಕೆಟ್‌ ಕಿಂಡಿ – ತಂದೆ ಗತಿಸಿದಂದೇ ಕ್ರಿಕೆಟ್ ಆಡಿದ ಕೊಹ್ಲಿ

ಭಾರತದ ಕ್ರಿಕೆಟ್‌ ತಂಡದ ನಾಯಕ ವಿರಾಟ್ ಕೊಹ್ಲಿ ಕುರಿತಾದ ಯಾರಿಗೂ ಗೊತ್ತಿಲ್ಲದ ಒಂದು ವಿಷಯ ಇದು. ಅಂದು ಅವರು ಕರ್ನಾಟಕದ ವಿರುದ್ಧ ರಣಜಿ ಟೆಸ್ಟ್ ಪಂದ್ಯ ಆಡಬೇಕಿತ್ತು. ಅದು 2006ರ ಡಿಸೆಂಬರ್ 16ರ ಮುಂಜಾವು ಮೂರು ಗಂಟೆ.ವಿರಾಟ್ ಕೊಹ್ಲಿ ತಂದೆ ಪ್ರೇಮ್ ಕೊಹ್ಲಿ ಬ್ರೈನ್ ಸ್ಟ್ರೋಕ್ ಗೆ ತುತ್ತಾಗಿದ್ದರು.ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಉಳಿಸಿಕೊಳ್ಳಲಾಗಲಿಲ್ಲ.ಅಂದು ದಿಲ್ಲಿ ಪರ ಬ್ಯಾಟ್ಟಿಂಗ್ ಮಾಡಬೇಕಿದ್ದ ಕೊಹ್ಲಿ ತಂದೆಯ ನಿಧನದ ಸುದ್ದಿಯನ್ನು ಫೋನಿನಲ್ಲಿ ಕೋಚ್ ಗೆ ತಿಳಿಸಿದರಂತೆ.ಕೊಹ್ಲಿಯನ್ನು ಸಮಾಧಾನ ಪಡಿಸಿದ ಕೋಚ್ ಧೈರ್ಯ ತುಂಬಿದರು.ಮರುಕ್ಷಣವೇ ಗಟ್ಟಿ ನಿಲುವು ತಳೆದ ಕೊಹ್ಲಿ ತಂದೆಯ ಶವವನ್ನು ಮನೆಯಲ್ಲಿಟ್ಟು ಕ್ರೀಸಿಗಿಳಿದರು.ಅತ್ಯದ್ಭುತ ಪ್ರದರ್ಶನ ತೋರಿ 90 ರನ್ ಪೇರಿಸಿದರು. ಅಂದು ಸಂಜೆ 3 ಗಂಟೆ ಸುಮಾರಿಗೆ ಮನೆಗೆ ತೆರಳಿ ತಂದೆಯ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡರು.
ಫೋರ್ತ್‌ ಅಂಪಾಯರ್‌

































































error: Content is protected !!
Scroll to Top