Sunday, October 17, 2021
spot_img
Homeದೇಶಯೋಧರೊಂದಿಗೆ ದೀಪಾವಳಿ ಆಚರಿಸಿಕೊಂಡ ಮೋದಿ

ಯೋಧರೊಂದಿಗೆ ದೀಪಾವಳಿ ಆಚರಿಸಿಕೊಂಡ ಮೋದಿ

ದಿಲ್ಲಿ, ನ.14: ಈ ವರ್ಷವೂ ದೀಪಾವಳಿ ಹಬ್ಬವನ್ನು ದೇಶ ಕಾಯುವ ಯೋಧರ ಜೊತೆಗೆ ಆಚರಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ನಿಮ್ಮ ಜೊತೆಗೆ ಇದ್ದರೆ ಮಾತ್ರ ನನ್ನ ದೀಪಾವಳಿ ಪರಿಪೂರ್ಣವಾಗುತ್ತದೆ ಎಂದು ಹೇಳಿ ಯೋಧರಲ್ಲಿ ಸ್ಥೈರ್ಯ ತುಂಬಿದ್ದಾರೆ.
ನೀವು ಹಿಮದಿಂದ ಆವೃತವಾದ ಪರ್ವತಗಳಲ್ಲಿ ಅಥವಾ ಮರುಭೂಮಿಗಳಲ್ಲಿರಬಹುದು. ನಾನು ನಿಮ್ಮೊಂದಿಗಿದ್ದಾಗ ಮಾತ್ರ ನನ್ನ ದೀಪಾವಳಿ ಹಬ್ಬ ಪರಿಪೂರ್ಣಗೊಳ್ಳುತ್ತದೆ. ನಿಮ್ಮ ಮುಖದಲ್ಲಿನ ಸಂತೋಷವನ್ನು ನೋಡಿದಾಗ ನನ್ನ ಸಂತೋಷ ದ್ವಿಗುಣಗೊಳ್ಳುತ್ತದೆ ಎಂದು ಮೋದಿ ಹೇಳಿದ್ದಾರೆ.
ರಾಜಸ್ಥಾನದ ಜೈಲ್ಮೇರ್‌ನ ಲೋಂಗೆವಾಲಾದಲ್ಲಿ ಮೋದಿ ಯೋಧರೊಂದಿಗೆ ದೀಪಾವಳಿ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಹಿಮಾಲಯದ ಶಿಖರಗಳು, ಮರುಭೂಮಿ, ದಟ್ಟ ಕಾಡುಗಳು ಅಥವಾ ಸಮುದ್ರಗಳ ಆಳವಾಗಿರಲಿ ಪ್ರತೀ ಸವಾಲಿನಲ್ಲೂ ನಿಮ್ಮ ಶೌರ್ಯವು ವಿಜಯ ಸಾಧಿಸಿದೆ. 1971 ರಲ್ಲಿ ಪಾಕಿಸ್ಥಾನದ ವಿರುದ್ಧ ನಡೆದ ಯುದ್ಧವು ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ನಡುವಿನ ಸಮನ್ವಯತೆಗೆ ಉದಾಹರಣೆಯಾಗಿದೆ. ಸೈನಿಕರ ಕುರಿತ ಇತಿಹಾಸವನ್ನು ಓದಿದಾಗಲೆಲ್ಲಾ ಲಾಂಗ್‌ವಾಲಾ ಕದನ ನೆನಪಿಸಿಕೊಳ್ಳಲಾಗುತ್ತದೆ. ಇಂದು 130 ಕೋಟಿ ಭಾರತೀಯರು ನಿಮ್ಮೊಂದಿಗೆ ನಿಂತಿದ್ದಾರೆ. ನಮ್ಮ ಯೋಧರ ಶೌರ್ಯ, ತ್ಯಾಗದ ಕುರಿತು ಪ್ರತೀಯೊಬ್ಬ ಭಾರತೀಯನೂ ಹೆಮ್ಮೆ ಪಡುತ್ತಿದ್ದಾನೆ. ನಿಮ್ಮ ಶೌರ್ಯದ ಬಗ್ಗೆ ಹೆಮ್ಮೆ ಪಡುತ್ತಿದ್ದಾರೆ. ವಿಶ್ವದ ಯಾವುದೇ ಶಕ್ತಿಯು ನಮ್ಮ ವೀರ ಯೋಧರನ್ನು ನಮ್ಮ ದೇಶದ ಗಡಿಗಳನ್ನು ಕಾಪಾಡುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದ್ದಾರೆ.
ಇಡೀ ವಿಶ್ವವೇ ಭಾರತದ ಎಂದಿಗೂ ತನ್ನ ಹಿತಾಸಕ್ತಿ ವಿಚಾರದಲ್ಲಿ ರಾಜಿಯಾಗುವುದಿಲ್ಲ ಎಂಬುದನ್ನು ಅರ್ಥಮಾಡಿಕೊಂಡಿದೆ. ಇದೆಲ್ಲವೂ ನಿಮ್ಮಿಂದ ಸಾಧ್ಯವಾಗಿದೆ ಎಂದಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!