Wednesday, October 27, 2021
spot_img
Homeವಾರ ಭವಿಷ್ಯವಿಪ್ಲವ ಸಂವತ್ಸರದ ವರ್ಷ ಭವಿಷ್ಯ

ವಿಪ್ಲವ ಸಂವತ್ಸರದ ವರ್ಷ ಭವಿಷ್ಯ

ಮೇಷ
ಈ ವರ್ಷ ಉತ್ತಮ ದೈವಬಲವಿರುವುದರಿಂದ ವೃತ್ತಿರಂಗದಲ್ಲಿ ಉತ್ತಮ ಸ್ಥಾನಮಾನ ಪ್ರೀತಿ ಪ್ರಾಪ್ತಿಯಾಗಲಿದೆ. ಶನಿಯು ಕರ್ಮಕ್ಷೇತ್ರದಲ್ಲಿ ಇದ್ದುಕೊಂಡು ಅತಿಯಾದ ಸ್ನೇಹ ಒಳ್ಳೆಯದಲ್ಲ ಎಂಬ ಸೂಚನೆಯನ್ನು ನೀಡುತ್ತಿದ್ದಾನೆ. ಸುಖ ಸಂಪತ್ತುಗಳು ನಿಮ್ಮ ಕಲ್ಪನೆಯಂತೆ ಬಂದರೂ ಖರ್ಚುವೆಚ್ಚಗಳಲ್ಲಿ ಇತಿಮಿತಿಯನ್ನು ಕಾಪಾಡಿಕೊಂಡು ಬರುವಂತೆ ರಾಹು ಕೇತುಗಳು ಸೂಚಿಸುತ್ತಿದ್ದಾರೆ. ಶುಭ ಸಮಾರಂಭಗಳನ್ನು ನಡೆಸಲು ಇದು ಸಕಾಲವಾಗಿರುತ್ತದೆ.
ವೃಷಭ
ಮಧ್ಯಮ ರೀತಿಯ ದೈವಬಲ. ರೈಲು ಹೋದ ನಂತರ ಟಿಕೆಟ್ ತೆಗೆದುಕೊಂಡಂತೆ ಎಂಬ ಗಾದೆಯಂತೆ ನೀವು ತಯಾರಾಗುವ ಹೊತ್ತಿಗೆ ಕಾಲ ಮಿಂಚಿ ಹೋಗಿರುತ್ತದೆ. ಕೌಟುಂಬಿಕ ಸುಖವನ್ನು ನೀವು ಅನುಭವಿಸಲಿದ್ದೀರಿ. ಸಾರ್ವಜನಿಕ ಸೇವಾ ಕಾರ್ಯಗಳಲ್ಲಿ ಪ್ರಶಂಸೆ ಗಳಿಸಲಿದ್ದೀರಿ .ಮನೆಯಲ್ಲಿ ಮಂಗಳ ಕಾರ್ಯಗಳು ಜರಗಲಿವೆ. ವಿದ್ಯಾರ್ಥಿಗಳಿಗೆ ಉತ್ತಮ ಕಾಲ.
ಮಿಥುನ
ನಿಮಗೆ ಈ ವರ್ಷ ಉತ್ತಮ ದೈವಾನುಗ್ರಹವಿರುವ ಕಾಲ. ಯಾವುದೇ ತೊಂದರೆಗಳಿಲ್ಲದೆ ಪ್ರತಿಯೊಂದು ವ್ಯವಹಾರಗಳು ನಡೆಯಲಿವೆ. ವಿವಾಹಾದಿ ಶುಭ ಸಮಾರಂಭಗಳಿಗೆ ಹೇಳಿ ಮಾಡಿಸಿದ ಕಾಲ. ಆರ್ಥಿಕವಾಗಿಯೂ ಸಂತೋಷವಾಗಿರುವಿರಿ ಗೃಹ ನಿರ್ಮಾಣ, ಸ್ಥಿರ ವಸ್ತುಗಳ ಖರೀದಿಗೆ ಇದು ಸಕಾಲವಾಗಿದೆ .ವಿದ್ಯಾರ್ಥಿಗಳು ಯಶಸ್ವಿಯಾಗಲಿರುವಿರಿ. ಎಲ್ಲ ವಿಷಯಗಳಲ್ಲಿ ಎಚ್ಚರದಿಂದ ಮುಂದುವರಿದಲ್ಲಿ ಹೆದರುವ ಅಗತ್ಯವಿಲ್ಲ.
ಕರ್ಕಾಟಕ
ಈ ವರ್ಷ ಹೇಳುವಷ್ಟು ದೈವ ಬಲವಿಲ್ಲ. ಆರಂಭದಿಂದಲೇ ವಿಷ್ಣು/ಶಿವ ಕ್ಷೇತ್ರಗಳಲ್ಲಿ ಸೇವೆಯನ್ನು ಸಲ್ಲಿಸುತ್ತಾ ಮುಂದುವರಿಯಬೇಕು. ಯಾವುದೇ ವ್ಯವಹಾರ ಮಾಡುವುದಿದ್ದಲ್ಲಿ ಎಚ್ಚರದಿಂದಲೇ ಮುಂದುವರಿಯಬೇಕು. ಯಾರಿಗೂ ಸಾಲ ಕೊಟ್ಟು ಅಥವಾ ತೆಗೆದುಕೊಂಡು ಗೆಳೆತನ ವನ್ನು ಕಳೆದುಕೊಳ್ಳಬೇಡಿ. ಮಾನಸಿಕ ಒತ್ತಡವನ್ನು ಮಾಡಿಕೊಳ್ಳದೆ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಸಮಾಧಾನದಿಂದ ಇರಬೇಕು.ಯೋಗ ಪ್ರಾಣಾಯಾಮ ಮಾಡಬೇಕು.
ಸಿಂಹ
ಈ ವರ್ಷ ಉತ್ತಮ ದೈವಾನುಗ್ರಹವಿದೆ. ಹೆಚ್ಚಿನ ಗ್ರಹಗಳು ನಿಮಗೆ ಸಾಕಷ್ಟು ಅನುಕೂಲತೆಯನ್ನು ಒದಗಿಸುವುದರಿಂದ ಸಂತೋಷದ ಜೀವನ ನಡೆಸಲಿದ್ದೀರಿ. ಶುಭ ಮಂಗಳ ಕೆಲಸಗಳು ನಡೆಯಲಿವೆ. ಸಮಾಜದಲ್ಲಿ ಹುಣ್ಣಿಮೆಯ ಚಂದ್ರನಂತೆ ಮಿಂಚಲಿದ್ದೀರಿ. ಭೂಮಿ, ವಾಹನ ಸುಖಗಳು ಲಭಿಸಲಿವೆ. ಉದ್ಯೋಗದಲ್ಲಿ ಶತ್ರು ಕಾಟ ನಿಮಗೆ ಇದ್ದರೂ ಸಮರ್ಥವಾಗಿ ಎದುರಿಸುವಿರಿ ಅಧಿಕಾರಿ ವರ್ಗದವರೊಡನೆ ಬಹಳ ಬುದ್ಧಿವಂತಿಕೆಯೊಂದಿಗೆ ನಯವಾಗಿ ನಡೆದುಕೊಳ್ಳಿರಿ.
ಕನ್ಯಾ
ನಿಮಗೆ ಈ ವರ್ಷ ದೈವಾನುಕೂಲತೆಯ ಕೊರತೆಯಿರುತ್ತದೆ.ಆರಂಭದಿಂದಲೇ ವಿಷ್ಣು/ಶಿವ ಕ್ಷೇತ್ರಕ್ಕೆ ಹೋಗುವ ಅಭ್ಯಾಸವನ್ನು ಇಟ್ಟುಕೊಳ್ಳಿರಿ.ದೇವಸ್ಥಾನದಲ್ಲಿ ಮೂರು ಸುತ್ತು ಬರುವಾಗ ಓಂ ನಾಮ: ಶಿವಾಯ 108 ಬಾರಿ ಹೇಳುತ್ತಾ ಬನ್ನಿರಿ.ಮಾನಸಿಕ ಒತ್ತಡವಿದ್ದರೂ ಏನಾದರೂ ಮನೋರಂಜನೆಯ ಮಾಧ್ಯಮವನ್ನು ಬಳಸಿಕೊಂಡು ಯಾರಲ್ಲಿಯೂ ಸಿಟ್ಟು ಮಾಡಿಕೊಳ್ಳದೆ ಮಕ್ಕಳಲ್ಲಿ ಸಮಾಧಾನದಿಂದ ವರ್ತಿಸಿರಿ.
ತುಲಾ
ಉತ್ತಮವಾದ ದೈವಾನುಗ್ರಹವಿರುವ ಸಮಯ. ಅನೇಕ ಶುಭ ಸಮಾರಂಭಗಳು ನಡೆಯುವ ಮತ್ತು ನೀವು ಭಾಗವಹಿಸುವ ಕಾಲವಿದು. ಸಾರ್ವಜನಿಕರೊಂದಿಗೆ ಸಂತೋಷವಾಗಿ ಬೆರೆಯುವ ಕಾಲ. ವಾಹನ ಸಂಚಾರದಲ್ಲಿ ಜಾಗ್ರತೆ ಬೇಕು. ಶನಿ, ರಾಹು, ಕೇತುಗಳು ನಿಮ್ಮ ಮನಸ್ಸಿನ ನೆಮ್ಮದಿ ಕಡಿಮೆಯಾಗುವಂತೆ ಮಾಡಬಹುದು. ಬಹಳ ಉಪಾಯದಿಂದ ಕಾಲಕ್ಕೆ ತಕ್ಕಂತೆ ನಡೆಯಿರಿ ಶಿವ ಸಹಸ್ರನಾಮ ಪಠಿಸಿರಿ.
ವೃಶ್ಚಿಕ
ದೈವ ಬಲ ಕಡಿಮೆಯಿದ್ದರೂ ಅದೃಷ್ಟ ಬಲವಿದೆ. ಲಕ್ಷ್ಮೀ ನರಸಿಂಹನ ಮಂತ್ರ ಪಠಿಸಬೇಕು.(ಉಗ್ರಮ್ ವೀರಮ್ ….) ಮನಸ್ಸಿಗೆ ನೆಮ್ಮದಿ ಕಡಿಮೆಯಾದಂತೆ ಕಾಣಲಿದೆ.ನಿಮ್ಮವರಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಆರ್ಥಿಕ ವಾಗಿಯೂ ನೀವು ಬಹಳ ಜಾಗ್ರತೆಯಿಂದಲೇ ಮುಂದುವರಿಯಬೇಕು.ನಮ್ಮನ್ನು ಸಾವಿರಾರು ಕಣ್ಣು ಸದಾ ನೋಡುತ್ತಿರುತ್ತಿವೆ ಎಂಬ ಸತ್ಯ ನಮಗೆ ಗೊತ್ತಿರಬೇಕು. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೂ ಎಲ್ಲರೂ ನೋಡುವಂತೆ ನಮ್ಮ ವ್ಯವಹಾರ ಪರಿಶುದ್ಧವಾಗಿರಬೇಕು.
ಧನು
ಈ ವರ್ಷ ದೈವಾನುಗ್ರಹವಿಲ್ಲ.ಹಾಗಾದರೆ ಬ್ಯಾಟ್ರಿ ರೀಚಾರ್ಜ್ ಮಾಡುವಂತೆ ಶಿವ/ ವಿಷ್ಣು ಕ್ಷೇತ್ರಕ್ಕೆ ಸಾಧ್ಯವಾದರೆ ಪ್ರತಿನಿತ್ಯ ಹೋಗಬೇಕು. ದೇವರಿಗೆ ಸುತ್ತುಬರುವಾಗ ದೇವರ ಸ್ಮರಣೆ ಹೆಜ್ಜೆಹೆಜ್ಜೆಗೆ ಹೇಳುತ್ತಾ ಮುಂದೆ ಹೋಗಬೇಕು.ನಿಮ್ಮವರಿಗೆ ಉಪಕಾರ ಮಾಡಲು ಹೋಗಿ ತೊಂದರೆಯನ್ನು ಮೈ ಮೇಲೆ ಎಳೆದುಕೊಳ್ಳಬೇಡಿ. ದೇಹ ವಾತಮಯವಾಗಿ ತೊಂದರೆ ಬರಲಿರುವುದರಿಂದ ವ್ಯಾಯಾಮ ಅತೀ ಅಗತ್ಯ ವೆನಿಸಲಿದೆ.
ಮಕರ
ಉತ್ತಮ ದೈವಬಲವಿರುವ ಸಮಯವಿದು. ಶನಿಯ ಕಾಟಕ್ಕೆ ಈಶ್ವರ ಕ್ಷೇತ್ರದಲ್ಲಿ ಪ್ರತಿ ಸೋಮವಾರ ಸಾಧ್ಯವಾದರೆ ರುದ್ರಾಭಿಷೇಕ ಮಾಡಿಸುತ್ತಾ ಬರಬೇಕು. ನಿಮ್ಮ ಸಾರ್ವಜನಿಕ ಜೀವನದಲ್ಲಿ ಅನೇಕ ಪ್ರಶಂಸೆಯನ್ನು ಪಡೆಯಲಿದ್ದೀರಿ. ಮನೆಯಲ್ಲಿ ಅನೇಕ ಶುಭ ಮಂಗಳ ಕೆಲಸಗಳು ನಡೆಯಲಿವೆ. ಆದರೆ ಹಣದ ವಿಷಯಲ್ಲಿ ಬಹಳ ಎಚ್ಚರವಹಿಸಬೇಕು ವಾಹನ ಸಂಚಾರದಲ್ಲಿ ಎಚ್ಚರ ವಹಿಸಬೇಕು.
ಕುಂಭ
ದೈವಬಲದ ಕೊರತೆ ಇರುತ್ತದೆ .ರಾಜನಂತೆ ಮೆರೆದ ವ್ಯಕ್ತಿಗೆ ಒಮ್ಮೆಲೇ ತೊಂದರೆಗಳು ಒಂದೊಂದೇ ಬರತೊಡಗಿದಾಗ ಮಾನಸಿಕ ಒತ್ತಡ ಬರದಂತೆ ಈಗಲೇ ಶಿವ/ವಿಷ್ಣು ಸಹಸ್ರನಾಮ ನಿತ್ಯವೂ ಹೇಳಲು ಆರಂಭ ಮಾಡಿ. ನಿಮ್ಮ ಸ್ಥಾನಮಾನಗಳಿಗೆ ತೊಂದರೆ ಬರಲು ಸಾಧ್ಯತೆ ಇರುವುದರಿಂದ ಮೊದಲೇ ಎಚ್ಚರವಿರಬೇಕು.ಯಾರಲ್ಲಿಯೂ ಜಗಳ ಕಲಹ ಬೇಡ. ವಾಹನಾದಿಗಳಲ್ಲಿ ಬಹಳ ಎಚ್ಚರವಿರಬೇಕು.
ಮೀನ
ದೈವಬಲ ಕಡಿಮೆಯಿರುವುದರಿಂದ ಧಾರ್ಮಿಕವಾಗಿ ನೀವು ಎಚ್ಚರವಾಗಿರಬೇಕು. ದೇವಿ ಸಹಸ್ರನಾಮವನ್ನು ನಿತ್ಯ ಹೇಳುವ ಅಭ್ಯಾಸವನ್ನು ಈಗದಿಂದಲೇ ಆರಂಭಿಸಿ.ಯಾವುದೇ ಹೊಸ ಕೆಲಸವನ್ನು ಆರಂಭಿಸುವ ಮೊದಲು ಹಲವು ಬಾರಿ ಯೋಚಿಸಬೇಕು. ಉದ್ಯೋಗದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಸ್ತ್ರೀ ಸಂಬಂಧವಾಗಿ ಅಪವಾದ ಬರದಂತೆ ಎಚ್ಚರವಹಿಸಬೇಕು.

ಕೆ.ಸುಬ್ರಹ್ಮಣ್ಯ ಆಚಾರ್ಯ
ಶ್ರೀ ಕಾರಿಂಜೇಶ್ವರ ಜ್ಯೋತಿಷ್ಯಾಲಯ, ಹಿರಿಯಂಗಡಿ, ಕಾರ್ಕಳ
ಸಂಪರ್ಕ :97414 89529

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!