ನ. 12 : ಕಾರ್ಕಳದಲ್ಲಿ ರಿಬ್ಬನ್ಸ್‌ ಆಂಡ್‌ ಬಲೂನ್ಸ್‌ ಕೇಕ್‌ ಶಾಪ್‌ ಶುಭಾರಂಭ

ಕಾರ್ಕಳ : ಹೆಸರಾಂತ ಕೇಕ್‌ ತಯಾರಿಕಾ ಸಂಸ್ಥೆ ರಿಬ್ಬನ್ಸ್ ಆಂಡ್‌ ಬಲೂನ್ಸ್‌ ನ 17ನೇ ಶಾಖೆ ನ. 12ರಂದು ಕಾರ್ಕಳದ ಬಾಲಾಜಿ ಆರ್ಕೇಡ್‌ ಕಾರ್‌ ಸ್ಟ್ರೀಟ್‌ನಲ್ಲಿ ಶುಭಾರಂಭಗೊಳ್ಳಲಿದೆ. ಕಾರ್ಕಳ ಕ್ಷೇತ್ರದ ಶಾಸಕ ವಿ. ಸುನಿಲ್‌ ಕುಮಾರ್‌ ಶಾಪ್‌ ಉದ್ಘಾಟಿಸಲಿದ್ದು, ಉದ್ಯಮಿಗಳಾದ ಹುರ್ಲಾಡಿ ರಘುವೀರ್‌ ಎ. ಶೆಟ್ಟಿ ನಲ್ಲೂರು, ಜಾನ್‌ ಡಿʼಸಿಲ್ವಾ, ಮೊಹಮ್ಮದ್‌ ಗೌಸ್‌ ಉಪಸ್ಥಿತರಿರುವರು ಎಂದು ಸಂಸ್ಥೆ ಪ್ರಕಟನೆ ತಿಳಿಸಿದೆ.

ದ.ಕ. ಉಡುಪಿ ಜಿಲ್ಲೆಯಲ್ಲಿ 17 ಶಾಖೆಗಳನ್ನು ಹೊಂದಿರುವ ರಿಬ್ಬನ್ಸ್‌ ಆಂಡ್‌ ಬಲೂನ್ಸ್‌ ದೇಶಾದ್ಯಂತ 136 ಶಾಖೆ ಹೊಂದಿದೆ. ಕೇಕ್, ಬಿಸ್ಕಿಟ್ಸ್‌, ಡೊನರ್ಸ್‌, ಪ್ಲಮ್‌ ಕೇಕ್‌, ದೀಪಾವಳಿಯ ಉಡುಗೊರೆ, ಮನೆಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳ ಗಿಫ್ಟ್‌ಗಳು ರಿಬ್ಬನ್ಸ್‌ ಮತ್ತು ಬಲೂನ್ಸ್‌ ಸಂಸ್ಥೆಯಲ್ಲಿ ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ. ಕಾರ್ಕಳದಲ್ಲಿ ಮೊದಲ ಶಾಖೆಯಾಗಿದ್ದು, ಗ್ರಾಹಕರು ಪ್ರೋತ್ಸಾಹಿಸುವಂತೆ ಸಂಸ್ಥೆ ಪ್ರಕಟನೆ ತಿಳಿಸಿದೆ. 9082345253





























































































































































































































error: Content is protected !!
Scroll to Top