ಕೊನೆಯ ಬಾಲ್‌ನಲ್ಲಿ ಸಿಕ್ಸರ್‌ ಹೊಡೆದು ಕಪ್‌ ಎತ್ತಿದ ಎನ್‌ಡಿಎ

ಬಿಹಾರದ ರಾಜಧಾನಿ ಪಾಟ್ನ ರಾಜಕೀಯ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪೊಲಿಟಿಕಲ್ ಲೀಗ್ ಮ್ಯಾಚ್‌ ಕೊನೆಯ ಓವರ್ ತನಕ ಅತ್ಯಂತ ಕುತೂಹಲಕಾರಿಯಾಗಿ ನಡೆದು ಕೊನೆಯ ಓವರ್‌ನ ಕೊನೆಯ ಬಾಲಿಗೆ ಸಿಕ್ಸರ್ ಬಾರಿಸುವುದರ ಮೂಲಕ 125 ರನ್ನುಗಳ ಗಡಿ ತಲುಪುದರೊಂದಿಗೆ ಎನ್.ಡಿ.ಎ.ತಂಡ ಬಿಹಾರ ಕಪ್‌ನ್ನು ಮತ್ತೆ ತನ್ನ ಮುಡಿಲಗೇರಿಸಿಕೊಂಡಿತು.
ವಿಜಯಿ ತಂಡದ ನಾಯಕ ನಿತೀಶ್ ಕೇವಲ 45 ರನ್ನುಗಳನ್ನು ಗಳಿಸುವುದರೊಂದಿಗೆ ಔಟಾಗಿ ಪೆವಿಲಿಯನ್ ತೆರಳಿದರು.ತಂಡದ ಉಪನಾಯಕ ಸುಶೀಲ್ ಮೋದಿ ತಮ್ಮ ಆಕಷ೯ಕ ಬ್ಯಾಟಿಂಗ್‌ ನಲ್ಲಿ 74 ರನ್ನು ಕಲೆ ಹಾಕುವುದರೊಂದಿಗೆ ತಂಡಕ್ಕೆ ಜಯ ತಂದು ಕೊಟ್ಟರು. ಮುಂದಿನ ತಂಡಕ್ಕೆ ನಾಯಕತ್ವ ವಹಿಸುವ ಆಹ೯ತೆ ಪಡೆದರೂ ಕೂಡಾ ಕ್ರಿಕೆಟ್ ಆಯ್ಕೆ ಮಂಡಳಿಯ ಅಣತಿಯಂತೆ ಮುಂದಿನ ನಾಯಕತ್ವವನ್ನು ನಿತೀಶ್ ರವರಿಗೆ ಬಿಟ್ಟು ಕೊಡುವ ತೀಮಾ೯ನ ಮಾಡಿದ್ದಾರೆ ಎಂದು ಬಲ್ಲ ಮೂಲದಿಂದ ತಿಳಿದು ಬಂದಿದೆ.
ಕೊನೆಯ ತನಕವೂ ಉತ್ತಮ ಆಟ ಪ್ರದಶಿ೯ಸಿ ಸೋತರು ಗೆಲುವಿನ ನಗುವನ್ನು ಬೀರಿದ ಎಂ.ಜಿ.ಬಿ.(ಮಹಾಘಟ್ ಬಂಧನ್) ತಂಡದ ಕಿರು ವಯಸ್ಸಿನ ಆಕಷ೯ಕ ನಾಯಕ ತೇಜಸ್ವಿ ಯಾದವ್‌ ಉತ್ತಮ ಆಲ್ ರೌಂಡರ್ ಆಟಗಾರನಾಗಿ 75ರನ್ನು ಗಳಿಸುವುದರೊಂದಿಗೆ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿ ಗಳಿಸಿ ಕೊಂಡರು.
ವಿಜೇತ ತಂಡದ ಕೊನೆಯ ಆಟಗಾರ ಚಿರಾಗ್ ಪಾಸ್ವಾನ್ ಕೇವಲ ಒಂದು ರನ್ನು ಗಳಿಸುವುದರೊಂದಿಗೆ ಅತ್ಯಂತ ಕಳಪೆ ಆಟ ಪ್ರದಶಿ೯ಸಿದ ಕಾರಣ ನಾಯಕ ನಿತೀಶ್ ರವರ ಅಸಮಾಧಾನಕ್ಕೆ ಕಾರಣರಾಗಿದ್ದಾರೆ.
ಎಂ.ಜಿ.ಬಿ.ತಂಡದ ಮ್ಯಾನೇಜರ್ ಸೋನಿಯಾ ಮತ್ತು ರಾಹುಲ್‌ರವರ ತರಬೇತಿಯ ಕೊರತೆಯೇ ಸೋಲಿಗೆ ಕಾರಣವಾಗಿದೆ ಎಂದು ನಾಯಕ ತೇಜಸ್ವಿ ಪ್ರತಿಕ್ರಿಯೆ ನೀಡಿದ್ದಾರೆ.ಮುಂದಿನ ಮ್ಯಾಚ್ ಗಳಿಗೆ ಅವರ ಜೊತೆ ಮಾತುಕತೆ ಮಾಡದಿರುವ ಎಲ್ಲ ಸಾಧ್ಯತೆಗಳಿವೆ ಅನ್ನುವುದು ತಜ್ಞರ ಅಭಿಪ್ರಾಯ.
ಕೊನೆಯ ಓವರ್‌ ಇರುವಾಗ ಸೋಲು ನಿಶ್ಚಿತ ಅನ್ನುವ ಸಂದರ್ಭದಲ್ಲಿ ತಂಡದ ನಾಯಕ ಆಟದ ಅಂಗಳದಲ್ಲಿ ಮೋಸ ನಡೆದಿದೆ ಎಂದು ಥರ್ಡ್‌ ಅಂಪಾಯರ್ ಗೆ ಮನವಿ ಮಾಡಿಕೊಂಡ ಕಾರಣ ಆಟ ಸ್ವಲ್ಪ ಹೊತ್ತು ಸ್ಥಗಿತಗೊಂಡು ಅವರ ಮಧ್ಯ ಪ್ರವೇಶದೊಂದಿಗೆ ಆಟ ಮತ್ತೆ ಶುರುವಾಗಿ ಅಂತಿಮ ಫಲಿತಾಂಶ ಹೊರ ಬೀಳುವಾಗ ಮಧ್ಯ ರಾತ್ರಿಯಾಗಿತ್ತು.
ಅಂತೂ ಬಿಹಾರ ಐ.ಪಿ.ಎಲ್. ಕಪ್‌ ಎಂ ಜಿ.ಬಿ.ತಂಡಕ್ಕೆ ಖಾತ್ರಿ ಅನ್ನುವ ಪೂವ೯ ವಿಶ್ಲೇಷಣೆ ಸಂಪೂರ್ಣವಾಗಿ ತಲೆ ಕೆಳಗಾಗಿರುವುದಂತೂ ಸತ್ಯ .ಒಟ್ಟಿನಲ್ಲಿ ಯಾರೇ ಗೆಲ್ಲಲಿ ಯಾರೇ ಸೋಲಲಿ ಹಗಲಿರುಳು ನಡೆದ ಈ ರಾಜಕೀಯ ಆಟ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿದಂತೂ ನೂರಕ್ಕೆ ನೂರು ಸತ್ಯ .
ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ,ಉಡುಪಿ































































































































error: Content is protected !!
Scroll to Top