Wednesday, October 27, 2021
spot_img
Homeದೇಶಬಿಹಾರ ಮುಂದುವರಿದ ಕದನ ಕುತೂಹಲ:ಸದ್ಯ ಎನ್‌ ಡಿಎ ಮುನ್ನಡೆ

ಬಿಹಾರ ಮುಂದುವರಿದ ಕದನ ಕುತೂಹಲ:ಸದ್ಯ ಎನ್‌ ಡಿಎ ಮುನ್ನಡೆ

ಪಟ್ನಾ,ನ.10: ಬಿಹಾರದ 243 ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ರಾತ್ರಿ 9.30ರ ತನಕ ಅರ್ಧದಷ್ಟು ಮುಗಿದಿದೆ.ರಾತ್ರಿ 8ಕ್ಕೆ ಪ್ರಕಟಿಸಿದ ಫಲಿತಾಂಶದ ಪ್ರಕಾರ ಬಿಜೆಪಿ 32 ಸ್ಥಾನಗಳನ್ನು ಗೆದ್ದುಕೊಂಡು 40 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಅದರ ಮಿತ್ರ ಪಕ್ಷ ಜೆಡಿಯು 16 ಕ್ಷೇತ್ರಗಳಲ್ಲಿ ಗೆದ್ದು 28 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಮಹಾಘಟಬಂಧನ್‌ ನೇತೃತ್ವ ವಹಿಸಿರುವ ಆರ್‌ ಜೆಡಿ 24 ಸ್ಥಾನಗಳಲ್ಲಿ ಗೆದ್ದು 51 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಅದರ ಮಿತ್ರ ಪಕ್ಷ ಕಾಂಗ್ರೆಸ್‌ 7 ಸ್ಥಾನಗಳಲ್ಲಿ ಗೆದ್ದು 12 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.ಅತಿ ದೊಡ್ಡ ಪಕ್ಷವಾಗಲು ಬಿಜೆಪಿ ಮತ್ತು ಆರ್‌ ಜೆಡಿ ನಡುವೆ ಪೈಪೋಟಿ ಏರ್ಪಟ್ಟಿದೆ. ಒಟ್ಟಾರೆಯಗಿ ಎನ್‌ ಡಿಎ ಮೈತ್ರಿಕೂಟ 130+ ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದರೆ ಮಹಾಘಟಬಂಧನ್‌ 105 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.ಸುಮಾರು 15 ಕ್ಷೇತ್ರಗಳಲ್ಲಿ ಅಂತರ 1000 ಮತಗಳ ಒಳಗಿರುವುದರಿಂದ ಅಂತಿಮ ಗೆಲುವಿನ ಬಗ್ಗೆ ಈಗಲೇ ಏನೂ ಹೇಳುವಂತಿಲ್ಲ. ಆದರೆ ಸದ್ಯದ ಟ್ರೆಂಡ್‌ ಪ್ರಕಾರ ಎನ್‌ ಡಿಎ ಸರಳ ಬಹುಮತದತ್ತ ಮುನ್ನುಗ್ಗುತ್ತಿದೆ.ವಾಮ ಪಕ್ಷಗಳು ಗಣನೀಯ ಸಾಧನೆ ಮಾಡಿದ್ದು,ಅತಂತ್ರ ಸ್ಥಿತಿ ಏರ್ಪಟ್ಟರೆ ಅವುಗಳು ನಿರ್ಣಾಯಕವಾಗುತ್ತವೆ.ಸರಳ ಬಹುಮತಕ್ಕೆ 122 ಸ್ಥಾನಗಳು ಬೇಕು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!