ಬೆಂಗಳೂರು,ನ. 1: 2017, 2018 ಮತ್ತು 2019ನೇ ಸಾಲಿನ ಏಕಲವ್ಯ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ ಮತ್ತು ಕ್ರೀಡಾ ಪೋಷಕ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಯುವ ಸಬಲೀಕರಣ ಮತ್ತು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಭಾನುವಾರ ಬಿಡುಗಡೆಗೊಳಿಸಿದ್ದಾರೆ. ಏಕಲವ್ಯ ಪ್ರಶಸ್ತಿಗೆ ಮೂರು ವರ್ಷದಲ್ಲಿ 31 ಮಂದಿ, ಜೀವಮಾನ ಸಾಧನೆ ಪ್ರಶಸ್ತಿಗೆ 6 ಮಂದಿ, ಕ್ರೀಡಾರತ್ನ ಪ್ರಶಸ್ತಿಗೆ 27 ಮಂದಿ, ಹಾಗೂ ಕ್ರೀಡಾ ಪೋಷಕ ಪ್ರಶಸ್ತಿಗೆ 5 ಮಂದಿ ಆಯ್ಕೆಯಾಗಿದ್ದಾರೆ.
ಮಂಗಳೂರು ಮೂಲದ ಕ್ರಿಕೆಟಿಗ ಕೆ. ಎಲ್. ರಾಹುಲ್, ಕಾರ್ಕಳದ ಅಭಿನಯ ಶೆಟ್ಟಿ ಏಕಲವ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕಂಬಳ ಕ್ಷೇತ್ರದ ಸಾಧಕರಾದ ಗೋಪಾಲಕೃಷ್ಣ ಪ್ರಭು ಸುರತ್ಕಲ್, ಶ್ರೀನಿವಾಸ ಗೌಡ ಮಿಜಾರು, ಸುರೇಶ್ ಶೆಟ್ಟಿ ಬೆಳ್ತಂಗಡಿ, ಕ್ರೀಡಾರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
