ಕಾರ್ಕಳ, ಅ.29: ಮುಂಬರುವ ಆಸ್ಟ್ರೇಲಿಯ ಪ್ರವಾಸಕ್ಕೆ ಭಾರತೀಯ ತಂಡದ ಉಪನಾಯಕನಾಗಿ ಆಯ್ಕೆಯಾಗಿರುವ ಕೆಎಲ್ ರಾಹುಲ್ ಜಾತಿಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅನಪೇಕ್ಷಿತ ಚರ್ಚೆಯೊಂದು ಪ್ರಾರಂಭವಾಗಿದೆ.
ಆಸ್ಟ್ರೇಲಿಯಾ ಪ್ರವಾಸಕ್ಕೆ ಉಪ ನಾಯಕರಾಗಿ ಆಯ್ಕೆಯಾಗಿರುವ ಕೆ.ಎಲ್. ರಾಹುಲ್ ಅವರಿಗೆ ವೀರಶೈವ-ಲಿಂಗಾಯತ ಪೊಲಿಟಿಕಲ್ ಬ್ರಿಗೇಡ್ ಎಂಬ ಫೇಸ್ಬುಕ್ ಪುಟದಲ್ಲಿ ರಾಹುಲ್ ಅವರು ವೀರಶೈವ-ಲಿಂಗಾಯತ ಸಮಾಜದ ಹೆಮ್ಮೆ ಎಂದು ಶುಭ ಕೋರಲಾಗಿದೆ. ಈ ಪೋಸ್ಟ್ ಗೆ ಅನೇಕ ಪ್ರತಿಕ್ರಿಯೆಗಳು ಬಂದಿವೆ.
ಕೆ.ಎಲ್. ರಾಹುಲ್ ಎರಡು ಕಿವಿ ಮುಚ್ಚಿಕೊಂಡು ಫುಟ್ಬಾಲ್ ಆಟಗಾರರ ರೀತಿ ಈ ಹಿಂದೆ ಶತಕ ಬಾರಿಸಿದ್ದನ್ನು ಸಂಭ್ರಮಿಸಿದ ಫೋಟೊ ಹಾಕಿರುವ ರವಿ ಪಾಳೆಗಾರ ಈ ರೀತಿ ಸೆಲೆಬ್ರೇಟ್ ಏಕೆ ಮಾಡುತ್ತಾರೆ ಎಂಬುದು ತಿಳಿಯದೆ, ಮುಸ್ಲಿಮರ ನಮಾಜ್ ರೀತಿ ಎಂದು ಅರ್ಥೈಸಿಕೊಂಡು ಸಿರಾಜೋ, ರಶೀದ್ ಖಾನೊ ಎಂದು ಪ್ರಶ್ನಿಸಿದ್ದಾರೆ. ರಾಹುಲ್ ಬಗ್ಗೆ ಈ ಪುಟದಲ್ಲಿ ಹಾಕಿದ್ದು ಏಕೆ ಎಂದು ಅಡ್ಮಿನ್ ಗೆ ಕೇಳಿದ್ದಾರೆ. ಜೊತೆಗೆ ರಾಹುಲ್ ಬ್ಯಾನ್ ಆಗಲು ಕಾರಣವಾಗಿದ್ದ ಸುದ್ದಿಯ ತುಣುಕು ತಂದು ಹಾಕಿದ್ದಾರೆ.
ಪ್ರಶಾಂತ್ ಗೌಡ ಪಾಟೀಲ್ ಎಂಬವರು ಲಿಂಗಾಯತರ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಲಿಂಗಾಯತರ ಬಗ್ಗೆ ಹಾಕದೆ ಮತ್ತೆ ಯಾರ ಬಗ್ಗೆ ಸುದ್ದಿ ಹಾಕಿಬೇಕಿತ್ತು. ರಾಹುಲ್ ಲಿಂಗಾಯತ ಎಂಬುದು ನಮ್ಮ ಹೆಮ್ಮೆ ಎಂದಿದ್ದಾರೆ. ಒಟ್ಟಾರೆ ಕ್ರಿಕೆಟ್ ಆಟ, ರಾಹುಲ್ ನಿರ್ವಹಣೆಗಿಂತ ಅವರ ಜಾತಿ, ಧರ್ಮವೇ ಮುಖ್ಯವಾಗಿ ಬಿಟ್ಟಿದೆ.
ರಾಮನಗರ ಜಿಲ್ಲೆ ಮಾಗಡಿ ತಾಲೂಕು ಕುದೂರು ಹೋಬಳಿ ಕಣ್ಣೂರು ಕೆ.ಎಲ್. ರಾಹುಲ್ ಅವರ ಊರು. ಮಾಗಡಿ ತಾಲೂಕಿನ ವೀರಶೈವ ಸಮಾಜದ ನಂಜಪ್ಪ ಅವರ ಮೊಮ್ಮಗ ಕೆ.ಎಲ್ ರಾಹುಲ್. ರೈತಾಪಿ ಕುಟುಂಬದಿಂದ ಬಂದಿರುವ ನಂಜಪ್ಪ ಅವರ ಮಗ ಮಂಗಳೂರಿನಲ್ಲಿ ಪ್ರೊಫೆಸರ್ ಲೋಕೇಶ್- ರಾಜೇಶ್ವರಿ ದಂಪತಿಯ ಪುತ್ರನೇ ರಾಹುಲ್. ಡಾ.ಲೋಕೇಶ್ ಅವರು NITK ಸುರತ್ಕಲ್ ನಲ್ಲಿ ಭೂಗರ್ಭ ವಿಜ್ಞಾನದ ಪ್ರೊಫೆಸರ್. ತಾಯಿ ರಾಜೇಶ್ವರಿ ಮಂಗಳೂರು ವಿವಿಯಲ್ಲಿ ಇತಿಹಾಸದ ಪ್ರೊಫೆಸರ್ ಆಗಿದ್ದಾರೆ.
ಕೆ. ಎಲ್. ರಾಹುಲ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅನಪೇಕ್ಷಿತ ಚರ್ಚೆ







































