ಫ್ರಾನ್ಸ್‌ ನಲ್ಲಿ ಮತ್ತೆ ಭಯೋತ್ಪಾದಕ ದಾಳಿ : ಮಹಿಳೆಯ ಶಿರಚ್ಛೇದ, ಇನ್ನಿಬ್ಬರ ಹತ್ಯೆ

0

ಪ್ಯಾರಿಸ್‌, ಅ. 29 : ಫ್ರಾನ್ಸ್‌ ನ ಫ್ರೆಂಚ್‌ ಸಿಟಿ ಆಫ್‌ ನೈಸ್‌ನ ಚರ್ಚ್‌ ಸಮೀಪ ಇಂದು ವ್ಯಕ್ತಿಯೊಬ್ಬ ಚಾಕುವಿನಿಂದ ಓರ್ವ ಮಹಿಳೆಯ ಶಿರಚ್ಛೇದ ಮಾಡಿ, ಇನ್ನಿಬ್ಬರನ್ನು ಇರಿದು ಸಾಯಿಸಿದ್ದಾನೆ. ನಗರದ ಮೇಯರ್‌ ಇದು ಜೆಹಾದಿಗಳು ಎಸಗಿದೆ ಉಗ್ರ ಕೃತ್ಯ ಎಂದು ಹೇಳಿದ್ದಾರೆ.
ನಾಟ್ರ್‌ ಡೇಮ್‌ ಚರ್ಚ್‌ ನಲ್ಲಿ ಈ ಭಯೋತ್ಪಾದಕ ದಾಳಿ ನಡೆದಿದ್ದು, ಪೊಲೀಸರು ಉಗ್ರನನ್ನು ಬಂಧಿಸಿದ್ದಾರೆ. ಮಹಿಳೆ ಸೇರಿ ಮೂವರು ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಮಹಿಳೆಯನ್ನು ಶಿರಚ್ಛೇದ ಮಾಡಿ ಸಾಯಿಸಲಾಗಿದೆ.
ಕೆಲವು ದಿನಗಳ ಹಿಂದೆಯಷ್ಟೇ ಪ್ಯಾರಿಸ್ ನ ಹೊರಭಾಗದಲ್ಲಿ ಶಿಕ್ಷಕರೊಬ್ಬರನ್ನು ಶಿರಚ್ಛೇದ ಮಾಡಿ ಸಾಯಿಸಲಾಗಿತ್ತು. ಅದರ ಆಘಾತದಿಂದ ಹೊರಬರುವ ಮೊದಲೇ ಇನ್ನೊಂದು ಭಯೋತ್ಪಾದಕ ದಾಳಿ ನಡೆದಿದೆ. ಈ ದಾಳಿಗೂ ಇಂದು ನಡೆದ ದಾಳಿಗೂ ಸಂಬಂಧ ಇರುವ ಸಾಧ್ಯತೆಯಿದೆ ಎಂದು ಪೊಲೀಸರು ಹೇಳಿದ್ದಾರೆ.

Previous articleಕೆ. ಎಲ್.‌ ರಾಹುಲ್‌ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಅನಪೇಕ್ಷಿತ ಚರ್ಚೆ
Next articleಅ.31 ರಂದು ನಿಟ್ಟೆ ತಾಂತ್ರಿಕ ಮಹಾ ವಿದ್ಯಾಲಯದ ಪದವಿ ಪ್ರದಾನ

LEAVE A REPLY

Please enter your comment!
Please enter your name here