ಈದು : ಜೀವ ಬೆದರಿಕೆ-ಹಲ್ಲೆ ದೂರು

ಕಾರ್ಕಳ : ಸರಕಾರಿ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ರತ್ನವರ್ಮ ಜೈನ್‌ ನೆಲ್ಲಿಕಾರು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ಈದು ಗ್ರಾಮದ ಜನತಾ ಕಾಲೋನಿ ನಿವಾಸಿ ಚಂದ್ರಾವತಿ (60) ಎಂಬವರು ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಗೆ ಅ. 27ರಂದು ದೂರು ನೀಡಿರುತ್ತಾರೆ. ಮಕ್ಕಳು, ಸೊಸೆಯಂದಿರು ಮತ್ತು ನೆರೆಕೆರೆಯವರೊಂದಿಗೆ ತಮ್ಮ ಮನೆಯ ಜಗಲಿಯಲ್ಲಿ ಕುಳಿತು ಮಾತನಾಡುತ್ತಿದ್ದ ಸಂದರ್ಭ ಅವಾಚ್ಯ ಶಬ್ದಗಳಿಂದ ಬೈದು ನಮ್ಮ ಜಾಗದಲ್ಲಿನ ತೆಂಗಿನಕಾಯಿಯನ್ನು ಕೊಯ್ಯುತ್ತೀಯಾ ಎಂದು ರತ್ನವರ್ಮ ಜೈನ್‌ ಬೆದರಿಕೆ ಒಡ್ಡಿರುತ್ತಾರೆ. ಮಗ ಪ್ರಕಾಶ್ ಪೂಜಾರಿಗೂ ಕೈಯಿಂದ ಹಲ್ಲೆ ಮಾಡಿ ಇನ್ನು ಮುಂದೆ ನನ್ನ ಸರಕಾರಿ ಜಾಗಕ್ಕೆ ಬಂದರೆ ಕಾಲು ಕಡಿದು ಹಾಕುತ್ತೇನೆ ಜೀವ ಬೆದರಿಕೆಯೊಡ್ಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.





















































































































































error: Content is protected !!
Scroll to Top