ಶಿಕ್ಷಕರಿಂದಲೇ ಪ್ರಾಂಶುಪಾಲರ ಹತ್ಯೆ : ಗಾಯಕಿ ಅನನ್ಯಾ ಭಟ್‌ ತಂದೆ ಸೇರಿ ಐವರ ಬಂಧನ


ಮೈಸೂರು,ಅ.28 : ನಗರದ ಸಂಸ್ಕೃತ ಪಾಠ ಶಾಲೆಯ ನಿವೃತ್ತ ಪ್ರಾಂಶುಪಾಲ ಪರಶಿವಮೂರ್ತಿ ಕೊಲೆ ಪ್ರಕರಣವನ್ನು ಭೇದಿಸಿರುವ ಸರಸ್ವತಿಪುರಂ ಪೊಲೀಸರು ಮೂವರು ಶಿಕ್ಷಕರು ಸೇರಿ ಐದು ಮಂದಿಯನ್ನು ಬಂಧಿಸಿದ್ದಾರೆ.ಖ್ಯಾತ ಗಾಯಕಿ ಅನನ್ಯಾ ಭಟ್ ತಂದೆ ವಿಶ್ವನಾಥ ಭಟ್ ಬಂಧಿತರಲ್ಲಿ ಒಬ್ಬರು.
ವಿಶ್ವನಾಥ್‌ ಭಟ್ , ಮಡಿವಾಳಸ್ವಾಮಿ, ಸಂಸ್ಕೃತ ಪಾಠಶಾಲೆ ಮುಖ್ಯಶಿಕ್ಷಕ ಸಿದ್ದರಾಜು, ಸಹ ಶಿಕ್ಷಕ ಪರಶಿವ, ಗಾರೆ ಮೇಸ್ತ್ರಿ ನಿರಂಜನ್, ಐಡಿಎಫ್ ಸಿ ಬ್ಯಾಂಕ್ ಸಾಲ ವಸೂಲಾತಿ ಅಧಿಕಾರಿ ನಾಗೇಶ್ ಸೆರೆಯಾದವರು.
ಬಂಧಿತರಿಂದ 55 ಸಾವಿರ ನಗದು, ನಾಲ್ಕು ದ್ವಿಚಕ್ರ ವಾಹನ, ಟಾಟಾ ಏಸ್ ಗೂಡ್ಸ್ ವಾಹನ, 8 ಮೊಬೈಲ್ ಫೋನ್ ಮತ್ತು 2 ಚಾಕುಗಳನ್ನು ವಶಕ್ಕೆ ಪಡೆಯಲಾಗಿದೆ.ಸುಪಾರಿ ಕೊಟ್ಟು ನಿವೃತ್ತ ಪ್ರಾಂಶುಪಾಲ ಪರಶಿವಮೂರ್ತಿ ಅವರನ್ನು ಕೊಲೆ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಪರಶಿವಮೂರ್ತಿ ಶಿಕ್ಷಕರ ಸಂಭಳಿ ನೀಡಲು ಕಮಿಷನ್‌ ಪಡೆಯುತ್ತಿದ್ದರು. ಕಮಿಷನ್‌ ಕೊಡದಿದ್ದರೆ ಸಂಬಳ ನೀಡದೆ ಸತಾಯಿಸುತ್ತಿದ್ದರು. ಇದರಿಂದ ಬೇಸತ್ತು ಆರೋಪಿ ಶಿಕ್ಷಕರು ಈ ಕೊಲೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.





















































































































































error: Content is protected !!
Scroll to Top