ಧರ್ಮಸ್ಥಳ ವತಿಯಿಂದ ವಿದ್ಯಾರ್ಥಿಗಳಿಗೆ 20,000 ಟ್ಯಾಬ್;‌ 10,000 ಲ್ಯಾಪ್ ಟಾಪ್‌ ವಿತರಣೆ

ಧರ್ಮಸ್ಥಳ, ಅ.26: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಗ್ರಾಮೀಣಾಭಿವೃದ್ಧಿ ಯೋಜನೆ (ಎಸ್ ಕೆಡಿಆರ್‌ ಡಿಪಿ) ಮೂಲಕ ಬಡ ವಿದ್ಯಾರ್ಥಿಗಳಿಗೆ 21 ಕೋ.ರೂ. ವೆಚ್ಚದಲ್ಲಿ 20,000 ಟ್ಯಾಬ್‌ ಮತ್ತು 10,000 ಲ್ಯಾಪ್‌ ಟಾಪ್‌ ಗಳನ್ನು ವಿತರಿಸಲಿದೆ.
ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ತನ್ನ ಪಟ್ಟಾಭಿಷೇಕದ 53ನೇ ವರ್ಧಂತಿ ಕಾರ್ಯಕ್ರಮದಲ್ಲಿ ಈ ಕೊಡುಗೆಯನ್ನು ಪ್ರಕಟಿಸಿದ್ದಾರೆ. ಇದಲ್ಲದೆ 8,000 ಎಕ್ಕರೆ ಜಮೀನಿನಲ್ಲಿ ಕೃಷಿ ಮಾಡಲು ಯಂತ್ರಶ್ರೀ ಯೋಜನೆಯಡಿಯಲ್ಲಿ 15 ಕೋ.ರೂ. ವೆಚ್ಚದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಖರೀದಿಸುವ ಯೋಜನೆಯನ್ನು ಪ್ರಕಟಿಸಿದ್ದಾರೆ.
ಬಡ ವಿದ್ಯಾರ್ಥಿಗಳ ಆನ್‌ಲೈನ್‌ ಶಿಕ್ಷಣಕ್ಕೆ ನೆರವಾಗುವ ಸಲುವಾಗಿ ಶ್ರೀ ಕ್ಷೇತ್ರ ವತಿಯಿಂದ ಈ ನೆರವು ನೀಡಲಾಗುವುದು. ರಾಜ್ಯಾದ್ಯಂತ ಕನ್ನಡ ಮಾಧ್ಯಮದ 5ರಿಂದ 10ನೇ ತರಗತಿ ವರೆಗಿನ ಮಕ್ಕಳು ರಿಯಾಯಿತಿ ಬೆಲೆಯ ಟ್ಯಾಬ್‌ ಯೋಜನೆಯ ಫಲಾನುಭವಿಗಳು.
ಲ್ಯಾಪ್‌ಟಾಪ್‌ ಅನ್ನು ಧರ್ಮಸ್ಥಳ ಸ್ವಸಹಾಯ ಸಂಘದ ಸದಸ್ಯರ ಕಾಲೇಜಿನಲ್ಲಿ ಕಲಿಯುತ್ತಿರುವ ಮಕ್ಕಳಿಗೆ ರಿಯಾಯಿತಿ ದರದಲ್ಲಿ ವಿತರಿಸಲಾಗುವುದು. ಲ್ಯಾಪ್‌ಟಾಪ್‌ ಜೊತೆಗೆ ಒಂದು ಎಜುಕೇಶನಲ್‌ ಕಿಟ್‌ ಉಚಿತವಾಗಿ ನೀಡಲಾಗುವುದು. ಟ್ಯಾಬ್‌ ಮತ್ತು ಲ್ಯಾಪ್‌ಟಾಪ್‌ ಖರೀದಿಸಲು ಧರ್ಮಸ್ಥಳ ಸ್ವಸಹಾಯ ಸಂಘದ ಮೂಲಕ ಸಾಲದ ನೆರವು ಸಿಗಲಿದೆ.
ಇದೇ ಕಾರ್ಯಕ್ರಮದಲ್ಲಿ ವೀರೇಂದ್ರ ಹೆಗ್ಗಡೆಯವರು ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ನಿರ್ವಸಿತರಿಗೆ ಮನೆ ನಿರ್ಮಿಸಿಕೊಡುವ ಹಾಗೂ ಇನ್ನಿತರ ಸೌಲಭ್ಯಗಳನ್ನು ಒದಗಿಸುವ ಯೋಜನೆಯನ್ನು ಪ್ರಕಟಿಸಿದ್ದಾರೆ.

a href="#" target="_blank">







































error: Content is protected !!
Scroll to Top