ರಕ್ತ ಹೀನತೆ ಸಮಸ್ಯೆಯೇ? ಹೀಗೆ ಮಾಡಿ


ದೇಹದಲ್ಲಿ ರಕ್ತದ ಕೊರತೆಯಾದರೆ ಅನೇಕ ಸಮಸ್ಯೆಗಳು ತಲೆದೂರುತ್ತವೆ. ಇದು ಪೋಷಕಾಂಶಗಳ ಕೊರತೆ ಅಥವಾ ವಂಶ ಪಾರಂಪರ್ಯದ ಕಾರಣಗಳಿಂದ ಉಂಟಾಗಬಹುದು. ರಕ್ತದಲ್ಲಿ ಹಿಮೊಗ್ಲೋಬಿನ್ ಮಟ್ಟ ಕಡಿಮೆಯಾದರೆ ದಣಿವು, ನಿರಾಸಕ್ತಿ, ಆರೋಗ್ಯದಲ್ಲಿ ಏರುಪೇರು ಮುಂತಾದ ರಕ್ತಹೀನತೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಹಿಮೋಗ್ಲೋಬಿನ್ ಹೆಚ್ಚಿಸಿಕೊಳ್ಳಲು ಇಲ್ಲಿದೆ ಕೆಲ ಮದ್ದುಗಳು:

  1. ಬೀಟ್ ರೂಟ್
    ಬೀಟ್ ರೂಟ್ ರಕ್ತಹೀನತೆಗೆ ಪರಿಣಾಮಕಾರಿ ಆಹಾರ. ಸಾಮಾನ್ಯ ರಕ್ತ ಕೊರತೆ ಉಂಟಾದರೆ ವೈದ್ಯರು ಕೂಡಾ ಮೊದಲು ಬೀಟ್ ರೂಟ್ ಸೇವನೆಗೆ ಸಲಹೆ ನೀಡುತ್ತಾರೆ. ಇದರಲ್ಲಿ ಇರುವ ಕಬ್ಬಿಣಾಂಶ, ಫೋಲಿಕ್ ಆಸಿಡ್, ಫೈಬರ್ ಮತ್ತು ಪೊಟ್ಯಾಷಿಯಂ ಅಂಶಗಳು ದೇಹದಲ್ಲಿ ರಕ್ತವನ್ನು ಹೆಚ್ಚಿಸುತ್ತವೆ.
  2. ದಾಳಿಂಬೆ
    ದಾಳಿಂಬೆ ತಿಂದರೆ ಶೀಘ್ರದಲ್ಲೇ ರಕ್ತಹೀನತೆಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಇದರಲ್ಲಿರುವ ಕಬ್ಬಿಣಾಂಶ, ಕ್ಯಾಲ್ಸಿಯಂ, ಪ್ರೊಟೀನ್, ಕಾರ್ಬೋಹೈಡ್ರೇಟ್ ಗಳು ಮತ್ತು ಫೈಬರ್ ಅಂಶಗಳು ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
  3. ನೆಲ್ಲಿಕಾಯಿ
    ವಿಟಮಿನ್ ಸಿ ಸಮೃದ್ಧವಾಗಿರುವ ನೆಲ್ಲಿಕಾಯಿ ಕೂಡಾ ರಕ್ತಹೀನತೆಯ ಸಮಸ್ಯೆಗೆ ಪ್ರಮುಖ ಆಹಾರವಾಗಿದೆ. ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ ಆಗಿರುವ ನೆಲ್ಲಿಕಾಯಿಯಲ್ಲಿ ಕ್ಯಾಲ್ಸಿಯಂ, ವಿಟಮಿನ್, ಕಬ್ಬಿಣಾಂಶ ಹೆಚ್ಚಾಗಿದ್ದು, ಇದನ್ನು ಪ್ರತಿನಿತ್ಯ ತಿಂದರೆ ರಕ್ತದ ಕೊರತೆಗೆ ಪರಿಹಾರ ಕಂಡುಕೊಳ್ಳಬಹುದು.
  4. ಸೇಬು
    ಪ್ರತಿನಿತ್ಯ ಸೇಬನ್ನು ತಿನ್ನುವುದರಿಂದ ಹಿಮೊಗ್ಲೋಬಿನ್ ಮಟ್ಟವನ್ನು ಹೆಚ್ಚಿಸಬಹುದು. ಆಪಲ್ ತಿನ್ನುವುದರಿಂದ ಆರೋಗ್ಯ ಕೂಡಾ ಉತ್ತಮಗೊಳ್ಳುತ್ತದೆ.
    ಇದರ ಸೇವನೆಯಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಬಹುದು.
    ಕೃಪೆ : ಜಾಗ್ರತಿ ಫೌಂಡೇಶನ್ ಕಾರ್ಕಳ








































































































error: Content is protected !!
Scroll to Top