ಫಾರೂಕ್ ಹತ್ಯಾ ಪ್ರಕರಣದ ಓರ್ವ ಆರೋಪಿ ಸೆರೆ


ಬಂಟ್ವಾಳ, ಅ. 24: ಬಂಟ್ವಾಳದ ಮೆಲ್ಕಾರ್‌ ನಲ್ಲಿ ನಿನ್ನೆ ಸಂಜೆ ನಡೆದ ರೌಡಿಶೀಟರ್‌ ಫಾರೂಕ್‌ ಹತ್ಯಾ ಪ್ರಕರಣದ ಆರೋಪಿಗಳ ಪೈಕಿ ಒಬ್ಬನನ್ನು ಪೊಲೀಸು ಬಂಧಿಸಿದ್ದಾರೆ. ಆರೋಪಿಗಳ ಸುಳಿವು ಸಿಕ್ಕಿ ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಒಬ್ಬನನ್ನು ಸೆರೆ ಹಿಡಿದಿದ್ದಾರೆ.
ಸೆರೆಯಾದವನನ್ನು ಖಲೀಲ್‌ ಎಂದು ಗುರುತಿಸಲಾಗಿದೆ. ಖಲೀಲ್‌ ಹಾಗೂ ಇನ್ನಿಬ್ಬರು ಬೆಂಗಳೂರಿನತ್ತ ಕಾರಿನಲ್ಲಿ ಸಾಗುತ್ತಿರುವ ಮಾಹಿತಿ ಸಿಕ್ಕಿ ಪೊಲೀಸರು ಬೆನ್ನಟ್ಟಿದ್ದಾರೆ. ಆಗ ಖಲೀಲ್‌ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಪೊಲೀಸರು ತಮ್ಮ ರಕ್ಷಣೆಗಾಗಿ ಪ್ರತಿ ಗುಂಡು ಹಾರಿಸಿದ್ದಾರೆ. ಗುಂಡಿನ ಚಕಮಕಿಯಲ್ಲಿ ಓರ್ವ ಪೊಲೀಸ್‌ ಇನ್ಸ್‌ ಪೆಕ್ಟರ್‌ ಮತ್ತು ಆರೋಪಿ ಖಲೀಲ್‌ ಗಾಯಗೊಂಡಿದ್ದಾನೆ. ತಪ್ಪಿಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.









































































































error: Content is protected !!
Scroll to Top