ದುರ್ಗಾ ಪೂಜಾ ಮಂಟಪದಲ್ಲಿ ಸೋನು ಸೂದ್‌ ಪ್ರತಿಮೆ : ರಿಯಲ್‌ ಹೀರೊಗೆ ವಿಶಿಷ್ಟ ಗೌರವ

ಕೊಲ್ಕೋತ್ತಾ, ಅ.23 : ಲಾಕ್‌ ಡೌನ್‌ ದಿನಗಳಲ್ಲಿ ಸಾವಿರಾರು ವಲಸೆ ಕಾರ್ಮಿಕರಿಗೆ ಊರಿಗೆ ಹೋಗಲು ಬಸ್‌ ಸಹಿತ ವಾಹನಗಳ ವ್ಯವಸ್ಥೆ ಮಾಡಿಕೊಟ್ಟು ಆಪತ್ಬಾಂಧವನಾದ ಬಾಲಿವುಡ್‌ ನಟ ಸೋನು ಸೂದ್‌  ನಿಜ ಜೀವನದಲ್ಲಿ ರಿಯಲ್‌  ಹೀರೊ ಎಂಬ ಪ್ರಶಂಸೆಗೆ ಪಾತ್ರರಾದವರು.  ಅವರ ಮಾನವೀಯ ಸೇವೆಗೆ ಹಲವು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ವಿವಿಧ ರಾಜ್ಯಗಳ ಸರಕಾರಗಳು ಕೂಡ ಸೋನು ಸೂದುವನ್ನು ಕೊಂಡಾಡಿವೆ. ಇದೀಗ ಕೊಲ್ಕೋತ್ತಾದ ದುರ್ಗಾ ಪೂಜೆ ಮಂಡಲವೊಂದು ಪೂಜಾ ಮಂಟಪದಲ್ಲಿ ಸೋನು ಸೂದ್‌ ಅವರ ಆಳೆತ್ತರದ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಿದೆ.

ಪ್ರತಿವರ್ಷ ದುರ್ಗಾ ಪೂಜಾ ಮಂಟಪವನ್ನು ಅರ್ಥಪೂರ್ಣ “ಥೀಮ್‌” ಗಳಿಂದ ಅಲಂಕರಿಸುವುದು ವಾಡಿಕೆ. ಅದರಂತೆ ಈ ಸಲ ಕೆಸ್ತೊಪುರ್‌ ಪ್ರಫುಲ್ಲ ಕನನ್‌ ದುರ್ಗಾ ಪೂಜಾ ಮಂಡಲ ತನ್ನ ಪೂಜಾ ಮಂಟಪವನ್ನು ಸೋನು ಸೂದ್‌ ಪ್ರತಿಮೆ ಸ್ಥಾಪಿಸುವ ಮೂಲಕ ಅಲಂಕರಿಸಿಕೊಂಡಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ದುರ್ಗಾ ಪೂಜಾ ಮಂಡಲದ ಕಾರ್ಯ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ಕೊರೊನಾದಿಂದಾಗಿ ಈ ವರ್ಷ ದುರ್ಗಾ ಪೂಜಾ ಮಂಡಳಗಳಿಗೆ ಭೇಟಿ ಕೊಡುವವರ ಸಂಖ್ಯೆ ವಿರಳವಾಗಿದ್ದರೂ ಹೋದವರೆಲ್ಲ ಸೋನು ಸೂದ್‌ ಪ್ರತಿಮೆ ಫೋಟಿ ಕ್ಲಿಕ್ಕಿಸದೆ  ವಾಪಸಾಗುವುದಿಲ್ಲ.

































































































































































error: Content is protected !!
Scroll to Top