ಕಾರ್ಕಳದಲ್ಲಿ ನವಂಬರ್‌ ತನಕ ಸಿನೇಮಾ ಪ್ರದರ್ಶನವಿಲ್ಲ

ಕಾರ್ಕಳ, ಅ.23: ಕೇಂದ್ರ ಸರಕಾರದ ಅನ್‌ ಲಾಕ್‌ ನಿಯಮಗಳನ್ನುಸರಿಸಿ ಕೆಲವು ನಗರಗಳಲ್ಲಿ ಸಿನೇಮಾ ಟಾಕೀಸುಗಳು ಕಾರ್ಯಾರಂಭ ಮಾಡಿವೆ. ಆದರೆ ಕಾರ್ಕಳದಲ್ಲಿ ನವಂಬರ್ ಮುಗಿಯುವವರೆಗೆ  ಸಿನೆಮಾ  ಬಿಡುಗಡೆ ಕಷ್ಟ.

ಕಾರ್ಕಳದಲ್ಲಿ ಇರುವ ಸಿನಿಪ್ರಿಯರಿಗೆ ಎರಡು ಥಿಯೇಟರ್ ಲಭ್ಯವಿವೆ. ರಾಧಿಕಾ ಮತ್ತು ಮೂವಿ ಪ್ಲಾನೆಟ್. ರಾಧಿಕಾ ಥಿಯೇಟರಿನಲ್ಲಿ ದಿನಕ್ಕೆ ನಾಲ್ಕು ಶೋ ಇದ್ದು ಹೊಸ ಹೊಸ ಸಿನೆಮಾಗಳು ಬಿಡುಗಡೆ ಆಗುತ್ತವೆ. ಪ್ಲಾನೆಟ್ ಥಿಯೇಟರ್ ಸಣ್ಣ ಹವಾನಿಯಂತ್ರಿತ ಥಿಯೇಟರ್ ಆಗಿದ್ದು ಸುಸಜ್ಜಿತವಾದ ಸ್ಕ್ರೀನ್, ಸೌಂಡ್ ಎಫೆಕ್ಟ್ ಹೊಂದಿದೆ. ಅಲ್ಲಿ  ದಿನಕ್ಕೆ ಬೇರೆ ಬೇರೆ ನಾಲ್ಕು ಸಿನೆಮಾ ಪ್ರದರ್ಶನಗಳು ಇರುತ್ತದೆ. ಎಲ್ಲಾ ಭಾಷೆಯ ಹೊಸ ಸಿನೆಮಾಗಳನ್ನು  ಜನ ಅಲ್ಲಿ ನೋಡುತ್ತಾರೆ.

ಆದರೆ ಕೊರೊನ ಕಾರಣಕ್ಕೆ ಮಾ. 19ರ ನಂತರ ಶೋಗಳು ನಡೆದಿಲ್ಲ. ಸಿನೆಮಾ ಪ್ರಿಯರಿಗೆ ಟಿವಿಯಲ್ಲಿ ಬರುವ ಹಳೆಯ ಸಿನೆಮಾ ನೋಡಿ ಸಾಕಾಗಿದೆ. ನೂರಾರು ಹೊಸ ಸಿನೆಮಾಗಳು  ಸಿದ್ಧವಿದ್ದು ನಿರ್ಮಾಪಕರು ಸ್ಕ್ರೀನ್ ಮಾಡಲು ತುದಿಗಾಲಿನಲ್ಲಿ ಕಾಯುವ ಪರಿಸ್ಥಿತಿ ಇದೆ. ಬೆಂಗಳೂರು, ಮೈಸೂರು ಮೊದಲಾದ ಕಡೆ ಸಿನೆಮಾ ಪ್ರದರ್ಶನ ಆರಂಭ ಆಗಿದ್ದರೂ ಮಂದಿರಗಳು ಖಾಲಿ ಇವೆ. ನಿರ್ಮಾಪಕರು, ಪ್ರದರ್ಶಕರು ಎಲ್ಲರೂ ನಷ್ಟದಲ್ಲಿ ಇದ್ದಾರೆ. ಕಾರ್ಕಳದಲ್ಲಿ           ಕೊರೋನಾ ಇನ್ನೂ ನಿಯಂತ್ರಣಕ್ಕೆ ಬಾರದ ಕಾರಣ ಜನ ಥಿಯೇಟರಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. 

ಅದರಿಂದ ನವಂಬರ್ ಮುಗಿಯುವ ತನಕ ಕಾರ್ಕಳದ ಸಿನೆಮಾ ಪ್ರಿಯರಿಗೆ ಥಿಯೇಟರಿಗೆ ಹೋಗಿ ಸಿನೆಮಾ ನೋಡುವುದು ಕಷ್ಟ ಎಂದು ಥಿಯೇಟರ್ ಮಾಲೀಕರು ಅಭಿಪ್ರಾಯ ಪಡುತ್ತಿದ್ದಾರೆ. ಅಲ್ಲಿಯವರೆಗೆ ಕಾಯಲೇ ಬೇಕು.















































































































































error: Content is protected !!
Scroll to Top