ಆರೋಗ್ಯಧಾರಾ – ದೇಹ ಪ್ರಕೃತಿ
(ಭಾಗ 3
ಪ್ರಕೃತಿಗೆ ಅನುಗುಣವಾಗಿ ನಾವು ನಮ್ಮ ಆಹಾರವನ್ನು ಸೇವಿಸಬೇಕು; ಇಲ್ಲದಿದ್ದರೆ ರೋಗೋತ್ಪತ್ತಿಗೆ ಕಾರಣವಾಗುತ್ತದೆ.

ಕಫ ಪ್ರಕೃತಿ ಮನುಷ್ಯನ ಲಕ್ಷಣಗಳು
ಕಫ ಪ್ರಕೃತಿ ಮನುಷ್ಯರು ಎಣ್ಣೆಯುಕ್ತ, ಸುಕೋಮಲ ಹಾಗೂ ಗೌರವರ್ಣ ತ್ವಚೆಯನ್ನು ಹೊಂದಿರುತ್ತಾರೆ .ಸ್ಥಿರ ಶರೀರ ಉಳ್ಳವರು .ಉದ್ದ ಹಾಗೂ ದಟ್ಟ ಕೂದಲು ವಿರುವವರು . ದೊಡ್ಡ ಕಣ್ಣು ,ಮೂಗು ,ಕಿವಿ ,ತುಟಿ ವಿರುವವರು. ಸುಂದರ ಮುಖ ಉಳ್ಳವರು. ಇವರ ಸ್ವರ ಮಧುರ ಹಾಗೂ ಇಂಪಾಗಿರುತ್ತದೆ. ಇವರ ಜಠರಾಗ್ನಿ ಮಂದವಿರುವುದರಿಂದ ಹಸಿವು ಹಾಗೂ ನೀರಡಿಕೆ ಕಡಿಮೆಯಿರುತ್ತದೆ .ದಷ್ಟಪುಷ್ಟ ದೇಹ ವಿರುವವರು.ಚಟುವಟಿಕೆಗಳನ್ನು ಮಂದಗತಿಯಲ್ಲಿ ಮಾಡುವವರು. ಅಲ್ಪ ಆಹಾರ ವಿಹಾರದಲ್ಲಿ ತೊಡಗುವವರು. ದುಃಖವನ್ನು ಸಹಿಸುವವರು.ತಮ್ಮ ಕಾರ್ಯವನ್ನು ವಿಧೇಯರಾಗಿ ಮಾಡುವವರು.ದೇಹ ಉಷ್ಣತೆ ಹಾಗೂ ಬೆವರು ಕಮ್ಮಿ ಪ್ರಮಾಣದಲ್ಲಿ ಗೋಚರಿಸುತ್ತದೆ . ಸಂದುಗಳು ಸದೃಢ.ದೃಷ್ಟಿ ಹಾಗೂ ಮುಖ ಪ್ರಸನ್ನವಾಗಿರುತ್ತದೆ .ಸ್ವರ ಮೃದುವಾಗಿರುವುದು. ಹೀಗೆ ಕಫ ಪ್ರಕೃತಿ ಮನುಷ್ಯನು ಬಲಾಡ್ಯ, ಧನಿಕ,ಓಜಸ್ವಿ, ಚಿಂತಕರು,ಶಾಂತ ,ದೀರ್ಘಾಯುಷ್ಯವಿರುವರು. ಕಫ ಪ್ರಕೃತಿ ಉಳ್ಳವರು ಕಫ ತುಂಬುವಿಕೆ, ಉಗುಳುವಿಕೆ, ದೇಹ ಭಾರ ,ಅತೀ ಆಲಸಿ ಹಾಗೂ ಹೆಚ್ಚು ನಿದ್ರೆ ಮಾಡುವವರುವಿರುತ್ತಾರೆ.
ಕಫ ಪ್ರಕೃತಿ ಮನುಷ್ಯನು ಸೇವಿಸಬಹುದಾದ ತರಕಾರಿಗಳು: ಬೀಟ್ರೂಟ್, ಬಸಳೆ ,ಎಲೆಕೋಸು ,ಮೂಲಂಗಿ ,ಹೂಕೋಸು ,ಆಲೂಗಡ್ಡೆ ,ಕ್ಯಾರೆಟ್, ಬಟಾಣಿ ,ಈರುಳ್ಳಿ ,ಬೆಳ್ಳುಳ್ಳಿ .
ಸೇವಿಸಬಾರದ ತರಕಾರಿಗಳು: ಸೌತೆಕಾಯಿ, ಸಿಹಿ ಗೆಣಸು ,ದೊಣ್ಣೆ ಮೆಣಸಿನಕಾಯಿ, ಟೊಮೇಟೊ .
ತ್ಯಾಜ್ಯ ಎಣ್ಣೆ: ಸೂರ್ಯಕಾಂತಿ,ಬಾದಾಮಿ ಬಿಟ್ಟು ಮಿಕ್ಕೆಲ್ಲಾ ಎಣ್ಣೆಯನ್ನು ಸೇವಿಸಬಹುದು.
ಸೇವಿಸಬಹುದಾದ ಹಣ್ಣುಗಳು: ಸೇಬು, ದಾಳಿಂಬೆ, ಅಂಜೂರ ,ದ್ರಾಕ್ಷಿ .
ಸೇವಿಸಬಾರದ ಹಣ್ಣುಗಳು: ಬಾಳೆ ಹಣ್ಣು, ಕಿತ್ತಳೆ,ಪಪ್ಪಾಯಿ, ಖರ್ಜೂರ ,ಅನಾನಸ್, ತೆಂಗು .
ಸಿಹಿ ತಿನಿಸುಗಳು: ಜೇನುತುಪ್ಪ ಮಾತ್ರ ಸೇವನೆಗೆ ಅರ್ಹ ಮಿಕ್ಕೆಲ್ಲವೂ ವರ್ಜ್ಯ.
ಹಾಲಿನ ಉತ್ಪನ್ನಗಳಲ್ಲಿ ಕೆನೆ ತೆಗೆದ ಹಾಲು ಸೇವನೆಗೆ ಅರ್ಹ ಮಿಕ್ಕೆಲ್ಲವೂ ವರ್ಜ್ಯ.
ಸಾಂಬಾರು ಪದಾರ್ಥಗಳನ್ನು ಮಿತವಾಗಿ ಬಳಸಬೇಕು. ಸೇವನೆಗೆ ಅರ್ಹ ಧಾನ್ಯ: ಜವೆಗೋಧಿ, ಚಿಕ್ಕ ಗೋಧಿ, ಮೆಕ್ಕೆಜೋಳ .
ದ್ವಿದಳ ಧಾನ್ಯಗಳಲ್ಲಿ: ಹುರುಳಿಕಾಳಿನ ಹೊರತು ಮಿಕ್ಕೆಲ್ಲವೂ ಸೇವನೆಗೆ ಅರ್ಹ.
ಮಾಂಸ – ಸೀಮೆ ಕೋಳಿ, ಸಿಗಡಿ ,ಮಿತ ರೂಪದಲ್ಲಿ ಸೇವಿಸಬಹುದು.
ತ್ಯಾಜ್ಯ ಮಾಂಸ: ಸಮುದ್ರ ಆಹಾರ, ಹಂದಿಯ ಮಾಂಸ.
ಕಾಯಿ ಬೀಜ: ಕುಂಬಳ ಬೀಜ ಸೇವನೆಗೆ ಅರ್ಹ ಮಿಕ್ಕೆಲ್ಲವೂ ತ್ಯಾಜ್ಯ .
ಇನ್ನು ವಾತ ಪಿತ್ತಪ್ರಕೃತಿ, ಪಿತ್ತ ಕಫ ಪ್ರಕೃತಿ ‘ವಾತ ಕಫ ಪ್ರಕೃತಿ ಹಾಗೂ ಸನ್ನಿಪಾತ ( ತ್ರಿದೋಷಗಳು ಸಮ ವಾಗಿರುವುದು )
ಇವರಲ್ಲಿ ದೋಷಗಳ ಪ್ರಾಮುಖ್ಯತೆಗೆ ಅನುಗುಣವಾಗಿ ಅದರ ಮಿಶ್ರ ಲಕ್ಷಣಗಳನ್ನು ಕಾಣಬಹುದು .
ಉದಾಹರಣೆಗೆ ವಾತ ಪಿತ್ತ ಪ್ರಕೃತಿಯುಳ್ಳ ಮನುಷ್ಯನಲ್ಲಿ ವಾತ ಹಾಗೂ ಪಿತ್ತ ಲಕ್ಷಣ ಮನುಷ್ಯರ ಮಿಶ್ರ ಲಕ್ಷಣಗಳು ಕಾಣಬಹುದು .
(ಮುಂದುವರಿಯುವುದು)
ಡಾ. ಹರ್ಷಾ ಕಾಮತ್
ಖ್ಯಾತ ಆಯುರ್ವೇದ ತಜ್ಞರು
























