ನಾವು ಮಲಗಿದ ಭಂಗಿ ಸರಿಯಿಲ್ಲದಿದ್ದರೆ, ಕುತ್ತಿಗೆ ಹೊರಳಾಡಿಸುವುದು ಹೆಚ್ಚು ಕಮ್ಮಿ ಆದರೆ ಕುತ್ತಿಗೆ ನೋವು ಬರುತ್ತದೆ. ಕುತ್ತಿಗೆ ನೋವು ಬಂದರೆ ತಲೆ ನೋವು ಬರುತ್ತದೆ.ಹೆಚ್ಚಾಗಿ ಕುತ್ತಿಗೆ ನೋವು ಬರುವುದು ನಾವು ರಾತ್ರಿ ಸರಿಯಾಗಿ ಮಲಗದಿದ್ದರೆ. ಹಾಗಾದರೆ ಕುತ್ತಿಗೆ ನೋವು ಬಂದರೆ ಏನು ಮಾಡಬೇಕು ಎಂಬುದು ಇಲ್ಲಿದೆ:
1. ಅಕ್ಕಿಯನ್ನು ಒಂದು ಬಟ್ಟೆಯಲ್ಲಿ ಕಟ್ಟಿಕೊಂಡು, ವಾಲಿಬಾಲ್ ನಷ್ಟು ದೊಡ್ಡ ಗಂಟು ಮಾಡಿಕೊಂಡು ಕುತ್ತಿಗೆಯ ಅಡಿಗೆ ಇಟ್ಟುಕೊಂಡು ಮಲಗಿದರೆ ಕುತ್ತಿಗೆ ನೋವು ನಿವಾರಣೆಯಾಗುತ್ತದೆ.
2. ಕುತ್ತಿಗೆಯನ್ನು ಮೆಲ್ಲನೆ ಅಲ್ಲಾಡಿಸಿ, ಕೈಯಿಂದ ಕುತ್ತಿಗೆಯನ್ನು ಹಿಡಿದು ಆ ಕಡೆಗೊಮ್ಮೆ , ಈ ಕಡೆಗೊಮ್ಮೆ ಆಲ್ಲಾಡಿಸಿದರೆ ಕುತ್ತಿಗೆಯ ಬಿಗಿ ಕಡಿಮೆ ಆಗುತ್ತದೆ. ನೋವು ಹೋಗುತ್ತದೆ.

3. ಕೊಬ್ಬರಿ ಎಣ್ಣೆಯನ್ನು ಕುತ್ತಿಗೆಗೆ ಹಚ್ಚಿಕೊಂಡು, ಬಿಸಿ ನೀರಿನ ಶಾಖ ನೀಡಿದರೂ ಕುತ್ತಿಗೆ ನೋವು ಹೋಗುತ್ತದೆ.
4. ಕುತ್ತಿಗೆ ಸಂಬಂಧಿಸಿದ ವ್ಯಾಯಾಮ ಮಾಡಬೇಕು. ಮತ್ತು ಹಿತವಾಗಿರುವ ದಿಂಬನ್ನು ಹಾಕಿಕೊಂಡು ಮಲಗುವುದನ್ನು ರೂಡಿಸಿಕೊಳ್ಳಬೇಕು. ಮಲಗುವ ಭಂಗಿ ಬದಲಾಯಿಸಬೇಕು.
5. ಒಂದು ಕಾಟನ್ ಬಟ್ಟೆಯನ್ನು ಆಪಲ್ ಸೈಡರ್ ವಿನೆಗರ್ ನಲ್ಲಿ ಅದ್ದಿ ಅದನ್ನು ಕುತ್ತಿಗೆಯ ಮೇಲೆ ಹತ್ತು ನಿಮಿಷ ಬಿಡಬೇಕು. ಎರಡು ದಿನ ಮಾಡಿದರೂ ಕುತ್ತಿಗೆ ನೋವು ಹೋಗುತ್ತದೆ.
6. ಹಾಟ್ ಅಥವಾ ಕೋಲ್ಡ್ ಕಂಪ್ರೆಸರ್ ಬ್ಯಾಗ್ ಅನ್ನು 10 ನಿಮಿಷ ಕುತ್ತಿಗೆಯ ಮೇಲಿಟ್ಟು ರಿಲ್ಯಾಕ್ಸ್ ಮಾಡಿ. ಹೀಗೆ ಮಾಡುವುದರಿಂದ ಕುತ್ತಿಗೆ ನೋವು ಕಡಿಮೆ ಆಗುತ್ತದೆ.
ಕೃಪೆ :ಜಾಗೃತಿ ಫೌಂಡೇಶನ್ ಕಾರ್ಕಳ























