ಇನ್ನೂ ನಿಯಂತ್ರಣಕ್ಕೆ ಬರದ ಸಿಟಿ ಸೆಂಟ್ರಲ್‌ ಮಾಲ್‌ ಬೆಂಕಿ: ಕೋಟ್ಯಂತರ ರೂ. ನಷ್ಟ

ಮುಂಬೈ,ಅ. 23 : ಮುಂಬೈ ಸೆಂಟ್ರಲ್‌ ನಲ್ಲಿರುವ ಸಿಟಿ ಸೆಂಟರ್ ಮಾಲ್ ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಸ್ಥಳಕ್ಕೆ ದೌಡಾಯಿಸಿರುವ 24 ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿವೆ. 250ಕ್ಕೂ ಹರಚ್ಚು ಸಿಬಂದಿಗಳು ಅಗ್ನಿಶಮನ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.  

ಕಳೆದ ರಾತ್ರಿ ಈ ಅಗ್ನಿ ಅವಘಡ ಸಂಭವಿಸಿದ್ದು, ಈ ವರೆಗೂ 3,500 ಜನರನ್ನು ಸುರಕ್ಷತವಾಗಿ ರಕ್ಷಣೆ ಮಾಡಿದ್ದಾರೆ. ಬೆಂಕಿಯ ಕೆನ್ನಾಲಿಗೆ 4 ಮಹಡಿಯ ಕಟ್ಟಡದ ಹಲವು ಕಡೆ ಹರಡಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. 

ಎರಡನೇ ಮಹಡಿಯ ಅಂಗಡಿಯೊಂದರಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಿಪ್ರವಾಗಿ ಐದನೇ ಮಹಡಿ ತನಕ ವ್ಯಾಪಿಸಿದೆ. ರಾತ್ರಿ 9 ಗಂಟೆಗೆ ಅವಘಡ ಸಂಭವಿಸಿದ್ದು, ಇಂದು ಬೆಳಗ್ಗೆ ಇದು ಭೀಕರ ಅಗ್ನಿ ದುರಂತ ಎಂದು ಆಗ್ನಿಶಾಮಕ ಪಡೆ ಘೋಷಿಸಿದೆ. ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ ಎನ್ನಲಾಗಿದೆ.

ಈ ನಡುವೆ ಕಾರ್ಯಾಚರಣೆ ವೇಳೆ ಓರ್ವ ಸಿಬ್ಬಂದಿ ಗಾಯಗೊಂಡಿದ್ದು, ಅವರನ್ನು ಜೆಜೆ ಆಸ್ಪತ್ರೆಗೆ ದಾಖಲು ಮಾಡಿದ್ದಾರೆಂದು ತಿಳಿದುಬಂದಿದೆ. ಅಗ್ನಿ ರೌದ್ರನರ್ತನ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಇದರ ಪಕ್ಕದಲ್ಲೇ 55 ಮಹಡಿಗಳಿ ಬೃಹತ್‌ ಕಟ್ಟಡವಿದ್ದು, ಇದರ ನಿವಾಸಿಗಳನ್ನೂ ತೆರವುಗೊಳಿಸಲಾಗಿದೆ.  











































error: Content is protected !!
Scroll to Top