ಕಾರ್ಕಳ : ಪುರಸಭೆ ಹಾಗೂ ರೋಟರಿ ಆನ್ಸ್ ಮತ್ತು ರೋಟರ್ಯಾಕ್ಟ್ ಕ್ಲಬ್ ಜಂಟಿ ಆಶ್ರಯದಲ್ಲಿ ಪುರಸಭೆ ವ್ಯಾಪ್ತಿಯ ಹಲವೆಡೆ ಅ. 19ರಂದು ಪೈಪ್ ಕಾಂಪೋಸ್ಟ್ ಅಳವಡಿಸಲಾಯಿತು. ಮನೆ ತ್ಯಾಜ್ಯವನ್ನು ಮನೆಯಂಗಳದಲ್ಲೇ ಸುಲಭವಾಗಿ ಕರಗಿಸಿ, ಉತ್ಕೃಷ್ಟ ಗೊಬ್ಬರ ತಯಾರಿಸುವ ‘ಪೈಪ್ ಕಾಂಪೋಸ್ಟ್’ ಪದ್ದತಿಯನ್ನು ಕಾರ್ಕಳ ಪುರಸಭಾ ವ್ಯಾಪ್ತಿಯ 15 ಕಡೆ ಅಳವಡಿಸಲಾಗಿದೆ.
ಶಿರ್ಡಿ ಕಾಲೇಜಿನ ಆವರಣದಲ್ಲಿ ಪೈಪ್ ಕಾಂಪೋಸ್ಟ್‌ಗೆ ಚಾಲನೆ ನೀಡಲಾಗಿದ್ದು, ಪುರಸಭಾ ಪರಿಸರ ಅಭಿಯoತರ ಮದನ್ ಕೆ., ಸುದೇಶ್, ಪುರಸಭಾ ಸದಸ್ಯೆ ಮಮತಾ ಪೂಜಾರಿ, ರೋಟರಿ ಆನ್ಸ್ ಕ್ಲಬ್ ಅಧ್ಯಕ್ಷೆ ರಮೀತಾ ಶೈಲೇಂದ್ರ ರಾವ್, ಕಾರ್ಯದರ್ಶಿ ಸುಮಾ ನಾಯಕ್, ರೋಟರ್ಯಾಕ್ಟ್ ಸಂಸ್ಥೆಯ ಕಾರ್ಯದರ್ಶಿ ಸಮೀರ್ ಹೆಗಡೆ, ಶಿರ್ಡಿ ಕಾಲೇಜಿನ ಸಂಸ್ಥಾಪಕ ಚಂದ್ರಹಾಸ ಸುವರ್ಣ, ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ ಮಮತಾ, ಪ್ರಸಾದ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅರಿವು ಮೂಡಿಸುವ ಕಾರ್ಯ

ಪುರಸಭೆ, ರೋಟರಿ ಆನ್ಸ್ ಮತ್ತು ರೋಟರ್ಯಾಕ್ಟ್ ಕ್ಲಬ್ ಸಹಯೋಗದಲ್ಲಿ ಪೈಪ್ ಕಾಂಪೋಸ್ಟ್ ಅಳವಡಿಕೆ ಕಾರ್ಯ ಮಾತ್ರವಲ್ಲದೇ ಈ ಕುರಿತು ಅರಿವು ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿದ.ೆ































