ಚೆನ್ನೈ ಸೂಪರ್ ಕಿಂಗ್ಸ್ ಆಲ್ಮೋಸ್ಟ್ ಔಟ್. ಮೂರು ಬಾರಿಯ ಐಪಿಲ್ ಚಾಂಪಿಯನ್ ಈ ವರ್ಷ ಪಾಯಿಂಟ್ಸ್ ಪಟ್ಟಿಯಲ್ಲಿ ಅತ್ಯಂತ ಕೆಳಗಿನ ಸ್ಥಾನದಲ್ಲಿ ಕೂತಿದೆ. ಇದು ಯಾರೂ ನಿರೀಕ್ಷೆ ಮಾಡದ ಫಲಿತಾಂಶ! ವಿಸಿಲ್ ಪೋಡು ಎಂದು ಲಕ್ಷಾಂತರ ಅಭಿಮಾನಿಗಳನ್ನು ಪಡೆದಿದ್ದ CSK ತಂಡದ ಈ ಕಳಪೆ ಸಾಧನೆ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಸ್ವತಃ ಧೋನಿ ಹೇಳಿದ ಹಾಗೆ ಅವರ ತಂಡ ಅಂದರೆ ಹಲವು ರಂಧ್ರ ಇರುವ ಹಡಗು ಆಗಿದೆ. ಒಂದು ರಂಧ್ರ ಸರಿಪಡಿಸುವ ಹೊತ್ತಿಗೆ ಇನ್ನೊಂದು ರಂಧ್ರ ಸಿದ್ಧವಾಗುತ್ತಿದೆ. ಆರಂಭಿಕ ವೈಫಲ್ಯ, ಬ್ಯಾಟ್ಸ್ ಮೆನ್ ಅಸ್ಥಿರ ಪ್ರದರ್ಶನ, ಬೌಲರುಗಳ ನಿರಾಶಾದಾಯಕ ಪ್ರದರ್ಶನ ಇವುಗಳ ಜೊತೆಗೆ ಕಳಪೆ ಫೀಲ್ಡಿಂಗ್ ಸೇರಿ CSK ಈ ವರ್ಷ ಪಾತಾಳಕ್ಕೆ ಕುಸಿದಿದೆ. ಸ್ವತಃ ಧೋನಿ ನಿರ್ವಹಣೆ ತುಂಬ ಟೀಕೆಗೆ ಗುರಿಯಾಗಿದೆ. ಕ್ಯಾಪ್ಟನ್ ಆಗಿ ಕೂಡ ತಪ್ಪು ನಿರ್ಧಾರಗಳಿಂದ ಧೋನಿ ಸೋಲು ಅನುಭವಿಸಿದ್ದಾರೆ. ಕೇವಲ 6 ಪಾಯಿಂಟ್ಸ್ ಹೊಂದಿರುವ ಧೋನಿ ಬಳಗ ಇನ್ನುಳಿದ ಎಲ್ಲಾ ಪಂದ್ಯ ಗೆದ್ದರೂ ಪ್ಲೇ ಆಫ್ ಪ್ರವೇಶ ಸಾಧ್ಯ ಇಲ್ಲ ಎಂಬ ಸ್ಥಿತಿಗೆ ತಲುಪಿದೆ.
ಚೆನ್ನೈ ಸೂಪರ್ ಕಿಂಗ್ಸ್ ಆಲ್ಮೋಸ್ಟ್ ಔಟ್


































