ಬೆಂಗಳೂರು, ಅ. 2: ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ನೀಡಲಾಗುವ ವಾರ್ಷಿಕ ದಸರಾ ರಜೆಯನ್ನು ಸರಕಾರ ಈ ವರ್ಷ ರದ್ದುಪಡಿಸಿದೆ. ದಸರಾ ರಜೆ ಎಂದೇ ಅರಿಯಲ್ಪಡುವ ಮಧ್ಯಂತರ ರಜೆ ಈ ವರ್ಷ ರದ್ದುಗೊಂಡಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಈ ವರ್ಷ ಅ.3ರಿಂದ 26ರ ತನಕ ಮಧ್ಯಂತರ ರಜೆ ಎಂದು ಫೆ.14ರಂದು ಹೊರಡಿಸಿ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ಕೊರೊನಾ ಕಾರಣದಿಂದ ಶಾಲೆಗಳು ಇನ್ನೂ ಆರಂಭವಾಗದಿರುವುದರಿಂದ ರಜೆ ರದ್ದು ಆಗಿರುವುದರಿಂದ ಮಕ್ಕಳಿಗೆ ಯಾವುದೇ ವ್ಯತ್ಯಾಸವಾಗುವುದಿಲ್ಲ. ಆದರೆ ನಿತ್ಯ ಶಾಲೆಗಳಿಗೆ ಹೋಗುತ್ತಿರುವ ಶಿಕ್ಷಕರಿಗೆ ಮಾತ್ರ ರಜೆ ಕಡಿತವಾಗಿದೆ.

































































