ಉಡುಪಿ, ಅ.1: ಸಾಲದ ಹೊರೆ ತಾಳಲಾರದೆ ಮೀನುಗಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಲ್ಪೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಕೃಷ್ಣ ಕಾಂಚನ್ (42) ಆತ್ಮಹತ್ಯೆ ಮಾಡಿಕೊಂಡಿರುವ ಮೀನುಗಾರ. ಸುಮಾರು 20 ವರ್ಷಗಳಿಂದ ಮಲ್ಪೆಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಅವರು ಕಳೆದ ಐದಾರು ತಿಂಗಳಿಂದ ಸಾಲದ ಹೊರೆಯಿಂದ ಬಹಳ ನೊಂದಿದ್ದರು. ನಿನ್ನೆ ರಾತ್ರಿ ಹಳೆಯ ಮನೆಯಲ್ಲಿ ಅವರು ಫ್ಯಾನಿಗೆ ಉರುಳು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರ ಸಹೋದರ ನೀಡಿದ ದೂರಿನ ಪ್ರಕಾರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.















