ಅತ್ತೂರು ಚರ್ಚ್‌ ವಠಾರದಲ್ಲಿ ಡಿಜಿಟಲ್‌ ಸರ್ವೇ ಕಾರ್ಯಕ್ಕೆ ಚಾಲನೆ

ಕಾರ್ಕಳ : ಅತ್ತೂರು ಚರ್ಚ್‌ ಆಡಳಿತ ಮಂಡಳಿಯು ಚರ್ಚ್‌ ಸುತ್ತಮುತ್ತಲಿನ ಸರಕಾರಿ ಜಮೀನನ್ನು ಕಬಳಿಕೆ ಮಾಡಿರುವ ಮತ್ತು ಯಾವೊಂದು ಇಲಾಖೆ ಅನುಮತಿಯಿಲ್ಲದೇ ಅಲ್ಲಿನ ಗುಡ್ಡೆವನ್ನು ಸಮತಟ್ಟುಗೊಳಿಸಿರುವ ಕುರಿತು ತಹಶೀಲ್ದಾರ್ ಅವರಿಗೆ ನೀಡಿರುವ ದೂರಿನ ಮೇರೆಗೆ ಇದೀಗ ಚರ್ಚ್‌ ವಠಾರದಲ್ಲಿ ಡಿಜಿಟಲ್‌ ಸರ್ವೇ ಕಾರ್ಯ ನಡೆಯುತ್ತಿದೆ.

ಸರ್ವೇ ಕಾರ್ಯ ನಡೆಸಲು ಶಾಸಕರ ಸೂಚನೆ

ಅತ್ತೂರು ಚರ್ಚ್‌ ವತಿಯಿಂದ ಭೂ ಒತ್ತುವರಿಯಾಗಿದೆ, ಅರಣ್ಯ ನಾಶವಾಗುತ್ತಿದೆ ಎನ್ನುವ ಕುರಿತು ಹಿಂದೂ ಜಾಗರಣ ವೇದಿಕೆಯು ಕೆಲ ತಿಂಗಳ ಹಿಂದೆ ಶಾಸಕರು, ಜಿಲ್ಲಾಧಿಕಾರಿಯವರಿಗೆ ದೂರು ನೀಡಲಾಗಿತ್ತು. ಮನವಿಗೆ ಸ್ಪಂದಿಸಿದ ಶಾಸಕ ವಿ. ಸುನಿಲ್‌ ಕುಮಾರ್ ಕಂದಾಯ ಇಲಾಖೆಗೆ ಸರ್ವೆ ಕಾರ್ಯ ನಡೆಸಲು ಮತ್ತು ಸರಕಾರಿ ಜಾಗ ಕಬಳಿಕೆ ಮಾಡದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಬಳಿಕ ಕಂದಾಯ ಇಲಾಖೆಯು ಸರ್ವೇ ಕಾರ್ಯವನ್ನು ಕೈಗೆತ್ತಿಕೊಂಡಿತ್ತಾದರೂ ಭೂಮಿಯನ್ನು ಸಮತಟ್ಟುಗೊಳಿಸಿದ ಕಾರಣ ಗಡಿಗುರುತು ಕಲ್ಲು ನಾಶವಾಗಿದ್ದು, ಸರ್ವೇ ಕಾರ್ಯ ನಡೆಸುವಲ್ಲಿ ತೊಡಕಾಗಿ ಪರಿಣಮಿಸಿತ್ತು.

ಡಿಜಿಟಲ್‌ ಸರ್ವೇಗೆ ಚಾಲನೆ

ಗಡಿಕಲ್ಲು ನಾಶವಾದ ಹಿನ್ನೆಲೆಯಲ್ಲಿ ಶಾಸಕರು ಕುಂದಾಪುರ ಸಹಾಯಕ ಆಯುಕ್ತ ರಾಜು, ತಹಶೀಲ್ದಾರ್‌ ಪುರಂದರ ಹೆಗ್ಡೆ, ಡಿಡಿಎಲ್‌ಆರ್‌ ಅವರೊಂದಿಗೆ ಸಭೆ ನಡೆಸಿ ಡಿಜಿಟಲ್‌ ಸರ್ವೇ ಕಾರ್ಯ ನಡೆಸುವಂತೆ ತಿಳಿಸಿದರು. ಅತ್ತೂರು ಪಟ್ಟಾ ಜಾಗದ ಮಾಹಿತಿ, ಸುತ್ತಮುತ್ತಲಿನ ಸರಕಾರಿ ಜಾಗದ ವಿವರ, ಡೀಮ್ಡ್‌ ಫಾರೆಸ್ಟ್‌ ಕುರಿತಾಗಿ ನಕ್ಷೆ ಸಹಿತ ವರದಿ ನೀಡುವಂತೆಯೂ ಸೂಚಿಸಿದ್ದರು. ಪರಿಣಾಮ ಸೆ. 30ರಂದು ಕಂದಾಯ ಇಲಾಖೆ ಅಧಿಕಾರಿಗಳು ಅತ್ತೂರು ಚರ್ಚ್‌ ವಠಾರದಲ್ಲಿ ಡಿಜಿಟಲ್‌ ಸರ್ವೇ ಕಾರ್ಯಕ್ಕೆ ಮುಂದಾಗಿದ್ದಾರೆ. ಡಿಜಿಟಲ್‌ ಸರ್ವೇ ಕಾರ್ಯದಿಂದಾಗಿ ಸದ್ಯದಲ್ಲೇ ಸಮರ್ಪಕ, ಸಮಗ್ರ ಮಾಹಿತಿ ಹೊರಬೀಳುವಂತಾಗಿದೆ.



























































































































error: Content is protected !!
Scroll to Top