ಕಾರ್ಕಳ : ನಿರ್ವಹಣೆಯಿಲ್ಲದೇ ಶೋಚನೀಯ ಸ್ಥಿತಿಯಲ್ಲಿದ್ದ ನಗರದ ಗಾಂಧಿ ಮೈದಾನದ ಬಳಿಯಿರುವ ಗಾಂಧಿ ಪ್ರತಿಮೆಗೆ ಕಾರ್ಕಳ ಪಡುತಿರುಪತಿ ಕ್ರಿಕೆಟರ್ಸ್ ತಂಡದ ಸದಸ್ಯರು ಬಣ್ಣ ಬಳಿದು ಅಂದಗೊಸಿದ್ದಾರೆ. ಲಾಕ್ ಡೌನ್ ಸಂದರ್ಭ ಕೊರೊನಾ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸಿದ್ದ ಸರಕಾರಿ ನೌಕರರು, ಆಹಾರದ ಅಗತ್ಯವುಳ್ಳವರಿಗೆ ಅತ್ಯಂತ ರುಚಿಕರವಾದ ಉಪಾಹಾರ, ಊಟ ಪೂರೈಸಿ ಮನೆಮಾತಾಗಿರುವ ಪಡುತಿರುಪತಿ ಕ್ರಿಕೆಟರ್ಸ್ ತಂಡ ಇದೀಗ ಗಾಂಧಿ ಜಯಂತಿ ಸಂದರ್ಭ ಪುರಸಭೆ ಮನವಿ ಮೇರೆಗೆ ಗಾಂಧಿ ಪ್ರತಿಮೆಯನ್ನು ಸುಂದರಗೊಳಿಸುವ ಮೂಲಕ ಮಹಾತ್ಮರಿಗೆ ಗೌರವ ಸಲ್ಲಿಸಿದೆ.







































































