ಕಾರ್ಕಳ : ಕೊರೊನಾ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಲಾಕ್ ಡೌನ್ ಹೇರಿದ ಸಂದರ್ಭ (22.5.2020) ಕಾರ್ಕಳ ಸರಕಾರಿ ಪದವಿ ಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗದಲ್ಲಿ ತರಗತಿ ನಡೆಯುತ್ತಿದೆ ಎಂದು ಪತ್ರಿಕೆಯೊಂದರಲ್ಲಿ ವರದಿ ಪ್ರಕಟವಾಗಿದ್ದು, ವರದಿ ಮಾಡಿದ ಪತ್ರಕರ್ತ ಸಂಪತ್ ನಾಯಕ್ ಎಂಬವರ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿ ದೂರು ದಾಖಲಿಸಲಾಗಿತ್ತು. ತನ್ನ ವಿರುದ್ಧ ಸುಳ್ಳು ದೂರು ನೀಡಲಾಗಿದೆ. ಸುಳ್ಳು ದೂರನ್ನು ರದ್ದು ಪಡಿಸುವಂತೆ ಸಂಪತ್ ಅವರು ದಾಖಲೆ ಸಹಿತ ಹೈಕೋರ್ಟ್ ಮೊರೆ ಹೋದರು. ಸೆ. 22ರಂದು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಪ್ರಕರಣಕ್ಕೆ ತಡೆಯಾಜ್ಞೆ ನೀಡಿದೆ. ಸಂಪತ್ ಪರವಾಗಿ ಹೈಕೋರ್ಟ್ ನ್ಯಾಯವಾದಿ ಪವನಚಂದ್ರ ಶೆಟ್ಟಿ ವಾದಿಸಿದ್ದರು.
ಪತ್ರಕರ್ತ ಸಂಪತ್ ನಾಯಕ್ ವಿರುದ್ಧ ಪ್ರಕರಣ ತನಿಖೆಗೆ ತಡೆ

































































