ಹೆಬ್ರಿ : ಸಂಗೀತದಿಂದ ದೊರೆಯುವ ಸಂತೋಷ ಅಪರಿಮಿತ. ದಿನನಿತ್ಯ ಸಂಗೀತ ಕೇಳುವುದರಿಂದ ನಮ್ಮ ಆರೋಗ್ಯದ ಮೇಲೂ ಉತ್ತಮ ಪರಿಣಾಮ ಬೀರುವುದು. ಹೆಬ್ರಿ ಜೇಸಿಐ ಹಾಗೂ ಚಾಣಕ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್ ಜಂಟಿಯಾಗಿ ಸಂಗೀತ ಕಾರ್ಯಕ್ರಮ ಆಯೋಜಿಸುವ ಮೂಲಕ ಗ್ರಾಮೀಣ ಪ್ರತಿಭೆಗಳಿಗೂ ಅವಕಾಶ ಕಲ್ಪಿಸುತ್ತಿರುವುದು ಶ್ಲಾಘನೀಯವೆಂದು ಹೆಬ್ರಿ ತಾಲೂಕು ಪಂಚಾಯತ್ ಅಧ್ಯಕ್ಷ ಶಿವಪುರ ರಮೇಶ ಪೂಜಾರಿ ಹೇಳಿದರು.
ಅವರು ಸೆ. 21ರಂದು ಹೆಬ್ರಿ ಚಾಣಕ್ಯ ಟ್ಯುಟೋರಿಯಲ್ ಸಭಾಂಗಣದಲ್ಲಿ ಜೇಸಿ ಸಪ್ತಾಹ 2020ದಂಗವಾಗಿ ನಡೆದ ಸಂಗೀತ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು. ಜೇಸಿಐ ಪೂರ್ವಾಧ್ಯಕ್ಷ ಕೃಷ್ಣ ಶೆಟ್ಟಿ, ಪ್ರಕಾಶ್ ಶೆಟ್ಟಿ, ಪುಟ್ಟಣ್ಣ ಭಟ್, ಪ್ರಶಾಂತ್ ಪೈ, ಜೇಸಿರೆಟ್ ಅಧ್ಯಕ್ಷೆ ಸುಚಿತ್ರಾ ಪಿ. ಶೆಟ್ಟಿ, ಯುವ ಜೇಸಿ ಅಧ್ಯಕ್ಷ ಆಕಾಶ್, ಚಾಣಕ್ಯ ಟ್ಯುಟೋರಿಯಲ್ ನ ಮುಖ್ಯಸ್ಥೆ ವೀಣಾ ಯು. ಶೆಟ್ಟಿ, ತೀರ್ಪುಗಾರರಾದ ರಮೇಶ್ ಶೆಟ್ಟಿ ಶಿವಪುರ, ಉದಯ್ ಶೆಟ್ಟಿ ಮುಟ್ಲುಪಾಡಿ, ರಕ್ಷಿತಾ ಪಿ. ಭಟ್, ಅರುಣ್ ಹೆಗ್ಡೆ, ಚಾಣಕ್ಯ ಇನ್ಸ್ಟಿಟ್ಯೂಟ್ ನ ಅಧ್ಯಕ್ಷ ಹೆಬ್ರಿ ಉದಯಕುಮಾರ್ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಜೇಸಿಐ ಅಧ್ಯಕ್ಷೆ ಸುನೀತಾ ಅರುಣ್ ಹೆಗ್ಡೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಕುಂತಲಾ ಬಲ್ಲಾಳ್ ವಂದಿಸಿದರು.































