ದ್ವಿತೀಯ ಸ್ಥಾನದತ್ತ ಭಾರತ ದಾಪುಗಾಲು : 40 ಲಕ್ಷ ದಾಟಿದ ಕೊರೊನಾ ಸೋಂಕಿತರು

ದಿಲ್ಲಿ, ಸೆ.5 : ಲಾಕ್‌ ಡೌನ್‌ ಸಡಿಲಿಕೆಯಾಗುತ್ತಿರುವಂತೆಯೇ ಕೊರೊನಾ ಸೋಂಕಿನ ಸಂಖ್ಯೆಯೂ ಹೆಚ್ಚುತ್ತಿದೆ. ಶನಿವಾರಕ್ಕಾಗುವಾಗ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 40 ಲಕ್ಷ ದಾಟಿದೆ.  ಒಂದೇ  ದಿನದಲ್ಲಿ   86,432 ಸೋಂಕಿತರು ಪತ್ತೆಯಾಗಿದ್ದಾರೆ. ಇದು ಕೊರೋನಾ ತವರು ಚೀನದಲ್ಲಿ ಕಳೆದ 10 ತಿಂಗಳ ಅವಧಿಯಲ್ಲಿ ದಾಖಲಾದ  ಪ್ರಕರಣಗಳಿಂತಲೂ ಹೆಚ್ಚು. ದೇಶದಲ್ಲಿ ಈಗ ಕೊರೊನಾ ಸೋಂಕಿತರ ಸಂಖ್ಯೆ 40,23,179ಕ್ಕೆ ತಲುಪಿದೆ. 

ಇನ್ನು 40,23,179 ಲಕ್ಷ ಪ್ರಕರಣಗಳೊಂದಿಗೆ ವಿಶ್ವದಲ್ಲಿ 2ನೇ ಸ್ಥಾನದಲ್ಲಿರುವ ಬ್ರೆಜಿಲ್ ಅನ್ನು ಭಾರತ ಶೀಘ್ರದಲ್ಲೇ ಹಿಂದಿಕ್ಕುವ ಸಾಧ್ಯತೆಗಳಿವೆ.  

ಇದೇ ವೇಳೆ ದೇಶದಲ್ಲಿ ಕಳೆದ 24 ತಾಸುಗಳಲ್ಲಿ 1089 ಮಂದಿ ಸಾವಿಗೀಡಾಗಿದ್ದು, ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ 69,561ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. 

40,23,179 ಲಕ್ಷ ಮಂದಿ ಸೋಂಕಿತರ ಪೈಕಿ 31,07,223 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ದೇಶದಲ್ಲಿನ್ನೂ 8,46,395 ರಷ್ಟು ಸಕ್ರಿಯ ಪ್ರಕರಣಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

































































































error: Content is protected !!
Scroll to Top