ಎಲ್ಲ ಚುನಾವಣೆಗಳಿಗೆ ಒಂದೇ ಮತದಾರರ ಪಟ್ಟಿ?

ದಿಲ್ಲಿ, ಆ.29 : ದೇಶದ ಚುನಾವಣಾ ವ್ಯವಸ್ಥೆಯಲ್ಲೇ ದೊಡ್ಡದೊಂದು ಬದಲಾವಣೆ ಮಾಡಲು ಕೆಂದ್ರ ಸರಕಾರ ಮುಂದಾಗಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಎಲ್ಲ ಚುನಾವಣೆಗಳಿಗೆ ಬಳಸಬಹುದಾದ ಒಂದೇ  ಮತದಾರ ಪಟ್ಟಿಯನ್ನು ಜಾರಿಗೆ ತರುವ ಉಪಕ್ರಮವೊಂದನ್ನು ಪ್ರಾರಂಭಿಸುವ ಕುರಿತಾಗಿ ಇತ್ತೀಚೆಗೆ ಪ್ರಧಾನಿ ಕಾರ್ಯಾಲಯ ಸಭೆಯೊಂದನ್ನು ನಡೆಸಿದೆ ಎಂದು ಈ ವರದಿಗಳು  ಹೇಳುತ್ತಿವೆ.

ಸ್ಥಳೀಯಾಡಳಿತ, ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಒಂದೇ ಮತದಾರ ಪಟ್ಟಿಯನ್ನು ರಚಿಸುವ ಕುರಿತು ಈ ಸಭೆಯಲ್ಲಿ ಚರ್ಚಿಸಲಾಗಿದೆ. ಆ. 13ರಂದು ನಡೆದ ಸಭೆಯ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ. ಪ್ರಧಾನಮಂತ್ರಿ ಕಾರ್ಯಾಲಯದ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರ ನೇತೃತ್ವದಲ್ಲಿ ಈ ಸಭೆ ನಡೆದಿದೆ.

ಎಲ್ಲ ಚುನಾವಣೆಗಳಿಗೂ ಒಂದೇ ಮತದಾರ ಪಟ್ಟಿಯನ್ನು ಜಾರಿಗೆ ತರಲು ಸಂವಿಧಾನದ ಎರಡು ಪರಿಚ್ಛೇದಗಳಿಗೆ ತಿದ್ದುಪಡಿ ಮಾಡುವುದು ಅಥವಾ ರಾಜ್ಯಗಳ ಮನವೊಲಿಸುವ ಸಾಧ್ಯತೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಇದು ಬಿಜೆಪಿ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಒಂದು ದೇಶ ಒಂದು ಚುನಾವಣೆ ಘೋಷಣೆಗೆ ಪೂರಕವಾಗಿರುವ ನಡೆ ಎನ್ನಲಾಗುತ್ತಿದೆ.

ಕಳೆದ ವರ್ಷ ನಡೆದ ಲೋಕಸಭೆ ಚುನಾವಣೆ ಸಂದರ್ಭದಲ್ಲೂ ಬಿಜೆಪಿ ಎಲ್ಲ ಚುನಾವಣೆಗಳಿಗೆ ಒಂದೇ ಮತದಾರರ ಪಟ್ಟಿಯನ್ನು ಬಳಸುವ ಬಗ್ಗೆ ಮಾತನಾಡಿದ್ದರೂ ಅದಕ್ಕೆ ಹೆಚ್ಚು ಒತ್ತು ಕೊಟ್ಟಿರಲಿಲ್ಲ. ಒಂದು ದೇಶ ಒಂದು ಚುನಾವಣೆ ಮೋದಿಯ ಕನಸಿನ ಕೂಸಾಗಿದ್ದರೂ ರಾಜಕೀಯ ಸಹಮತ ಮೂಡದಿದ್ದರೆ ಇದು ನನಸಾಗುವುದ ಅಸಾಧ್ಯ.









































































































error: Content is protected !!
Scroll to Top