ಬೆಳೆ ಸಮೀಕ್ಷೆಯ ಸದುಪಯೋಗ ಪಡೆಯಲು ಸುನಿಲ್‌ ಕುಮಾರ್‌ ಕರೆ

ಕಾರ್ಕಳ, ಆ.25: ರೈತರು ತಮ್ಮ ಜಮೀನಿನ ದಾಖಲಾತಿಗಳ ಬಗ್ಗೆ ತೋರುವ ಕಾಳಜಿಯನ್ನೇ ಬೆಳೆ ದಾಖಲು ಮಾಡುವ ಕುರಿತು ತೋರುವ ಅವಶ್ಯಕತೆಯಿದೆ. ಸರ್ಕಾರದ ವಿವಿಧ ಸವಲತ್ತುಗಳಿಗೆ ಬೆಳೆ ದಾಖಲಾತಿ ಮಾನದಂಡವಾಗಲಿದೆ. ರೈತರು ಯಾವುದೇ ಗೊಂದಲಗಳಿಲ್ಲದೆ ತಮ್ಮ ಜಮೀನಿನ ಬೆಳೆ ವಿವರಗಳನ್ನು ತಾವೇ ದಾಖಲಿಸಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಈ ಸಮೀಕ್ಷೆಯ ಸದುಪಯೋಗ ಪಡೆಯಬೇಕೆಂದು ಶಾಸಕ ವಿ. ಸುನಿಲ್ ಕುಮಾರ್ ಕರೆ ನೀಡಿದರು. ಅವರು ಇಂದು ಮಾಳ ಮಲ್ಲಾರಿನಲ್ಲಿ ಜರುಗಿದ ಕಾರ್ಕಳ ತಾಲೂಕು ಮಟ್ಟದ ಬೆಳೆ ಸಮೀಕ್ಷೆ 2020 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಅವರು ಆ. 25ರಂದು ಮಾಳದಲ್ಲಿ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ, ಭಾರತೀಯ ಕಿಸಾನ್ ಸಂಘ, ತೋಟಗಾರಿಕೆ ರೈತರ ಉತ್ಪಾದಕ ಕಂಪನಿ ಹಾಗೂ ಕಲ್ಪವೃಕ್ಷ ತೆಂಗು ಬೆಳೆಗಾರರ ಸಂಘ ಮಾಳ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಬೆಳೆ ಸಮೀಕ್ಷೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಮಾತನಾಡಿದರು. ಮಾಳ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಅಜಿತ್ ಹೆಗ್ಡೆ, ಕಾರ್ಕಳ ತೋಟಗಾರಿಕೆ ರೈತರ ಉತ್ಪಾದಕ ಕಂಪನಿಯ ಉಪಾಧ್ಯಕ್ಷ ಹರೀಶ್ಚಂದ್ರ ತೆಂಡೂಲ್ಕರ್, ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಉಮಾನಾಥ ರಾನಡೆ,  ಕಲ್ಪವೃಕ್ಷ ತೆಂಗು ಬೆಳೆಗಾರರ ಸಂಘದ ಮಾಳ ಅಧ್ಯಕ್ಷ ಅಶೋಕ ಬರ್ವೆ, ಕಾರ್ಕಳ ತೋಟಗಾರಿಕೆ ರೈತರ ಉತ್ಪಾದಕ ಕಂಪನಿಯ ನಿರ್ದೇಶಕ ಅನಿಲ್ ಪೂಜಾರಿ, ಸಹಾಯಕ ಕೃಷಿ ನಿರ್ದೇಶಕರ ಜಯರಾಜ್ ಪ್ರಕಾಶ್‌ ಉಪಸ್ಥಿತರಿದ್ದರು. ಹೆಬ್ರಿ ತಹಶೀಲ್ದಾರ್ ಮಹೇಶ್ಚಂದ್ರ ಸ್ವಾಗತಿಸಿ, ತೋಟಗಾರಿಕೆ ಸಹಾಯಕ ನಿರ್ದೇಶಕ ಬಿ.ವಿ. ಶ್ರೀನಿವಾಸ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

















































error: Content is protected !!
Scroll to Top