2019-20ರಲ್ಲಿ 2,000 ರೂ. ನೋಟು ಮುದ್ರಣವಾಗಿಲ್ಲ

ದಿಲ್ಲಿ, ಆ.25 : 2019-20ರಲ್ಲಿ ಒಂದೇ ಒಂದು 2,000ರೂ. ನೋಟು ಮುದ್ರಣವಾಗಿಲ್ಲ. ಈ ಮಾಹಿತಿಯನ್ನು ಸ್ವತಃ ಆರ್‌ಬಿಐ ಇಂದು ಬಿಡುಗಡೆಗೊಳಿಸಿದ ತನ್ನ ವಾರ್ಷಿಕ ವರಿದಯಲ್ಲಿ ಬಹಿರಂಗಪಡಿಸಿದೆ. 2,000 ರೂ.ನೋಟು ಚಲಾವಣೆಯನ್ನು ಕಡಿಮೆಗೊಳಿಸುವ ಸಲುವಾಗಿ ಅರ್‌ಬಿಐ 2,000 ನೋಟುಗಳನ್ನು ಮುದ್ರಿಸುತ್ತಿಲ್ಲ. ಇದರಿಂದಾಗಿ 2019-20ನೇ ಸಾಲಿನಲ್ಲಿ 2,000 ರೂ. ನೋಟುಗಳ ಚಲಾವಣೆ ಶೇ.22ಕ್ಕಿಳಿದಿದೆ.

2,000ರೂ. ಮುಖಬೆಲೆಯ ಸಾಕಷ್ಟು  ನೋಟುಗಳು ಚಲಾವಣೆಯಲ್ಲಿರಿವುದರಿಂದ ಈಗ ಆ ನೋಟುಗಳನ್ನು ಮುದ್ರಿಸುತ್ತಿಲ್ಲ ಎಂಬುದಾಗಿ ಕಳೆದ ವರ್ಷವೇ ಸರಕಾರ ಹೇಳಿತ್ತು. ಅಂತಿಮವಾಗಿ 2,000 ರೂ.ನೋಟುಗಳನ್ನು ಚಲಾವಣೆಯಿಂದ ಹಿಂದೆಗೆದುಕೊಳ್ಳುವುದು ಸರಕಾರದ ಉದ್ದೇಶ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.

ಸರಕಾರದ ಸೂಚನೆಯಂತೆ ಅರ್‌ಬಿಐ ಕರೆನ್ಸಿ ನೋಟುಗಳನ್ನು ಮುದ್ರಿಸುತ್ತಿದೆ. 2019-20ನೇ ಸಾಲಿನಲ್ಲಿ 2,000 ರೂ.ನೋಟಿಗೆ ಯಾವುದೇ ಇಂಡೆಂಟ್‌ ಬಾರದ ಕಾರಣ ನೋಟುಗಳ ಮುದ್ರಣವಾಗಿಲ್ಲ ಎಂದು ಆರ್‌ಬಿಐ ಹೇಳಿದೆ.

2016, ನ.8 ರಂದು ಸರಕಾರ 500 ರೂ. ಮತ್ತು 1,000 ರೂ. ನೋಟುಗಳನ್ನು ನಿಷೇಧಿಸಿದಾಗ 2,000 ರೂ. ನೋಟುಗಳನ್ನು  ಮುದ್ರಿಸಲಾಗಿತ್ತು.









































































































error: Content is protected !!
Scroll to Top