ಕಾರ್ಕಳ : ಭೂ ಸುಧಾರಣ ಮಸೂದೆಯ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾಯ್ದೆ ತಿದ್ದುಪಡಿ ರೈತ ಹಾಗೂ ಕಾರ್ಮಿಕ ವಿರೋಧಿಯಾಗಿದ್ದು ಇವುಗಳನ್ನು ಕೂಡಲೇ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಕಾರ್ಕಳ ಬ್ಲಾಕ್ ಸಮಿತಿ ವತಿಯಿಂದ ಕಾರ್ಕಳ ತಹಶೀಲ್ದಾರರ ಮೂಲಕ ಆ. 20ರಂದು ರಾಜ್ಯಪಾಲರಿಗೆ ಮನವಿ ನೀಡಲಾಯಿತು.
ಪರಿಹಾರ ಕೊಡುವಲ್ಲಿ ವಿಫಲ
ರಾಜ್ಯದಲ್ಲಿ ಅತಿವೃಷ್ಠಿಯಿಂದಾಗಿರುವ ತೀವ್ರ ಹಾನಿಗೆ ಪರಿಹಾರ ಒದಗಿಸಲು ಸರಕಾರ ವಿಫಲವಾಗಿದೆ. ಕೊರೋನಾ ಹೆಸರಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಈ ಕುರಿತು ಉಚ್ಚ ನ್ಯಾಯಾಲಯದ ಹಾಲಿ ನ್ಯಾಯಾದೀಶರಿಂದ ನ್ಯಾಯಾಂಗ ತನಿಖೆ ನಡೆಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ. ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೇಖರ ಮಡಿವಾಳ, ಡಿಸಿಸಿ ಉಪಾಧ್ಯಕ್ಷ ಸುಧಾಕರ ಕೋಟ್ಯಾನ್, ಡಿಸಿಸಿ ಸದಸ್ಯ ಸಿರಿಯಣ್ಣ ಶೆಟ್ಟಿ, ಉದ್ಯಮಿ ಉಪೇಂದ್ರ ನಾಯಕ್, ಕೆಪಿಸಿಸಿ ಕಿಸಾನ್ ಘಟಕದ ಕಾರ್ಯದರ್ಶಿ ಉದಯ ಶೆಟ್ಟಿ, ವಕ್ತಾರ ನಕ್ರೆ ಬಿಪಿನ್ ಚಂದ್ರಪಾಲ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರ, ಆರೀಫ್ ಕಲ್ಲೊಟ್ಟೆ, ನಗರಾಧ್ಯಕ್ಷ ಮಧುರಾಜ್ ಶೆಟ್ಟಿ, ಹಿಂದುಳಿದ ವರ್ಗದ ಅಧ್ಯಕ್ಷ ಕುಶ ಮೂಲ್ಯ, ರಾಜೇಶ್ ದೇವಾಡಿಗ, ರಾಜೇಂದ್ರ ಕಾರ್ಕಳ, ಪುರಸಭಾ ಸದಸ್ಯರಾದ ಶುಭದ ರಾವ್, ಹರೀಶ್ ಕುಮಾರ್, ವಿನ್ನಿ ಬೋಲ್ಡ್, ಮಾಜಿ ಮಹಿಳಾಧ್ಯಕ್ಷೆ ಮಾಲಿನಿ ರೈ, ವಿನ್ನಿ ಡಿ’ಸೋಜಾ, ಮಾಜಿ ಪುರಸಭಾ ಸದಸ್ಯರಾದ ನವೀನ್ ದೇವಾಡಿಗ, ವಿವೇಕಾನಂದ ಶೆಣೈ, ಸುನೀಲ್ ಕುಮಾರ್ ಮೊದಲಾದವರು ಈ ಸಂದರ್ಭದಲ್ಲಿಉಪಸ್ಥಿತರಿದ್ದರು.

















