ರಾಜೀವ ಗಾಂಧಿ ಆಧುನಿಕ ಭಾರತದ ರೂವಾರಿ -ಶೇಖರ್‌ ಮಡಿವಾಳ್‌

ಕಾರ್ಕಳ : ದೇಶಕ್ಕೆ ಮಾಹಿತಿ ತಂತ್ರಜ್ಞಾನದ ಮೂಲಕ ಆಡಳಿತಕ್ಕೆ ಹೊಸ ಆಯಾಮ ನೀಡಿದ ಪ್ರಧಾನಿ ರಾಜೀವ ಗಾಂಧಿ ಆಧುನಿಕ ಭಾರತದ ರೂವಾರಿ ಎಂದು ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ, ನ್ಯಾಯವಾದಿ ಶೇಖರ ಮಡಿವಾಳ್‌ ಹೇಳಿದರು.

ಅವರು ಆ. 20ರಂದು ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜೀವ ಗಾಂಧಿ ಅವರು ಪಂಚಾಯತ್ ರಾಜ್ ಮಸೂದೆಯ ಮೂಲಕ ದೇಶದ ಪ್ರತಿಯೊಬ್ಬ ಪ್ರಜೆಯೂ ತಳಮಟ್ಟದ ಆಡಳಿತ ವ್ಯವಸ್ಥಯಲ್ಲಿ ಭಾಗವಹಿಸಲು ಅವಕಾಶವನ್ನು ಮಾಡಿಕೊಟ್ಟವರು ಎಂದವರು ಹೇಳಿದರು.

ಬಡವರ ಬದುಕು ಬದಲಿಸಿದವರು
ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಹಿಂದುಳಿದ ವರ್ಗದ ಜನರ ಬದುಕು ಬದಲಿಸಿದ ಮಹಾನಾಯಕ. ಭೂ ಸುದಾರಣಾ ಮಸೂದೆಯ ಯಶಸ್ವೀ ಅನುಷ್ಟಾನ, ಹಿಂದುಳಿದ ವರ್ಗಕ್ಕೆ ಪ್ರತ್ಯೇಕ ಇಲಾಖೆಯ ಹುಟ್ಟು ಹಾಕಿದ ಕೀರ್ತಿ ದೇವರಾಜ ಅರಸು ಅವರಿಗೆ ಸಲ್ಲಬೇಕು ಎಂದು ಶೇಖರ್‌ ಮಡಿವಾಳ್‌ ಅಭಿಪ್ರಾಯಪಟ್ಟರು. ಡಿಸಿಸಿ ಉಪಾಧ್ಯಕ್ಷ ಸುಧಾಕರ ಕೋಟ್ಯಾನ್, ಡಿಸಿಸಿ ಸದಸ್ಯ ಸಿರಿಯಣ್ಣ ಶೆಟ್ಟಿ, ಉದ್ಯಮಿ ಉಪೇಂದ್ರ ನಾಯಕ್, ಕೆಪಿಸಿಸಿ ಕಿಸಾನ್ ಘಟಕದ ಕಾರ್ಯದರ್ಶಿ ಉದಯ ಶೆಟ್ಟಿ, ಆರೀಫ್ ಕಲ್ಲೊಟ್ಟೆ , ನಗರಾಧ್ಯಕ್ಷ ಮಧುರಾಜ್ ಶೆಟ್ಟಿ, ಹಿಂದುಳಿದ ವರ್ಗದ ಅಧ್ಯಕ್ಷ ಕುಶ ಮೂಲ್ಯ, ಐಟಿ ಸತೀಶ, ರಾಜೇಶ್ ದೇವಾಡಿಗ, ರಾಜೇಂದ್ರ ಕಾರ್ಕಳ, ಪುರಸಭಾ ಸದಸ್ಯರಾದ ಶುಭದ ರಾವ್, ಹರೀಶ್ ಕುಮಾರ್, ವಿನ್ನಿ ಬೋಲ್ಡ್, ಸೀತಾರಾಮ್, ವಿಶ್ವನಾಥ ಭಂಡಾರಿ, ಫೆಲಿಕ್ಸ್ ಡಿʼಸೋಜಾ, ಮನೋಜ್, ವಾಸು ಶೆಟ್ಟಿ, ಮಾಜಿ ಮಹಿಳಾಧ್ಯಕ್ಷೆ ಮಾಲಿನಿ ರೈ, ವಿನ್ನಿ ಡಿ’ಸೋಜಾ, ಶೋಭಾ, ಸರೋಜಿನಿ, ಮಾಜಿ ಪುರಸಭಾ ಸದಸ್ಯರಾದ ನವೀನ್ ದೇವಾಡಿಗ, ಸುನೀಲ್ ಕೋಟ್ಯಾನ್, ವಿವೇಕಾನಂದ ಶೆಣೈ, ಸುನೀಲ್ ಕುಮಾರ್, ಅಬ್ದುಲ್ ಸಾಣೂರು ಮೊದಲಾದವರು ಉಪಸ್ಥಿತರಿದ್ದರು.

ಕಾಂಗ್ರೆಸ್‌ ವಕ್ತಾರ ನಕ್ರೆ ಬಿಪಿನ್‌ ಚಂದ್ರ ಪಾಲ್ ಸ್ವಾಗತಿಸಿ, ಬ್ಲಾಕ್‌ ಕಾರ್ಯದರ್ಶಿ ಪ್ರಭಾಕರ ಬಂಗೇರ ನಿರೂಪಿಸಿ, ವಂದಿಸಿದರು.









































































































error: Content is protected !!
Scroll to Top